ಮನೆಯಲ್ಲಿ ಗಾಜಿನ ಒಂದಲ್ಲ ಒಂದು ವಸ್ತುವಿರುತ್ತದೆ. ಕೆಲವರು ಮನೆಯಲ್ಲಿ ಅತಿ ಹೆಚ್ಚು ಗಾಜಿನ ವಸ್ತುಗಳನ್ನು ಬಳಸ್ತಾರೆ. ಟೀ ಕಪ್ ನಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಅನೇಕ ವಸ್ತುಗಳು ಗಾಜಿನದ್ದಾಗಿರುತ್ತವೆ. ಆದ್ರೆ ಈ ಗಾಜಿನ ವಸ್ತುಗಳು ಬಿದ್ದು ಒಡೆದು ಹೋದ್ರೆ ಮನಸ್ಸಿಗೆ ಬೇಸರವಾಗುವ ಜೊತೆಗೆ ಅಶುಭ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಗಾಜುಗಳು ಒಡೆಯುವುದು ಶುಭ ಎನ್ನಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಗಾಜಿನ ವಸ್ತುವು ಇದ್ದಕ್ಕಿದ್ದಂತೆ ಒಡೆದರೆ ಅದು ಅಶುಭವಲ್ಲ. ಮನೆಯಲ್ಲಿನ ಬಿಕ್ಕಟ್ಟು ಮುಗಿದಿದೆ ಎಂಬ ಸಂಕೇತವನ್ನು ನೀಡುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಸುಧಾರಣೆ ವಿಷ್ಯದಲ್ಲೂ ಇದನ್ನು ಹೋಲಿಸಲಾಗುತ್ತದೆ.
ಗಾಜು ಒಡೆಯುವುದು ಒಳ್ಳೆಯ ಸಂಕೇತವಾಗಿರಬಹುದು. ಆದ್ರೆ ಒಡೆದ ಗಾಜನ್ನು ಮನೆಯಲ್ಲಿಟ್ಟುಕೊಳ್ಳುವುದು ಅಶುಭ. ಇದು ಮನೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಹಾಗಾಗಿ ಒಡೆದ ಗಾಜುಗಳನ್ನು ಮನೆಯಲ್ಲಿ ಇಡಬೇಡಿ. ಸ್ವಲ್ಪ ಒಡೆದಿದ್ದರೂ ಅದನ್ನು ಕಸಕ್ಕೆ ಎಸೆಯುವುದು ಉತ್ತಮ.