ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ಹೃದಯದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಖಾಯಿಲೆಯನ್ನು ತಡೆಗಟ್ಟುವ ಶಕ್ತಿ ತಾಯಿಯ ಎದೆ ಹಾಲಿನಲ್ಲಿದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಕೇವಲ ತಾಯಿ ಹಾಲು ಕುಡಿದು ಬೆಳೆದ 30 ಮಕ್ಕಳು ಹಾಗೂ ಫಾರ್ಮುಲಾ ಮಿಲ್ಕ್ ಸೇವಿಸಿದ 15 ಮಕ್ಕಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು.
ಎಲ್ಲರ ಹೃದಯದ MRI ಮಾಡಲಾಗಿದ್ದು, ಅವಧಿಗೂ ಮುನ್ನ ಜನಿಸಿರುವುದರಿಂದ ಹಾರ್ಟ್ ಚೇಂಬರ್ ಸಣ್ಣದಾಗಿದೆ. ಆದ್ರೆ ಫಾರ್ಮುಲಾ ಮಿಲ್ಕ್ ಕುಡಿದ ಮಕ್ಕಳಿಗೆ ಹೋಲಿಸಿದ್ರೆ, ಎದೆ ಹಾಲು ಸೇವಿಸಿದ ಮಕ್ಕಳಲ್ಲಿ ಹಾರ್ಟ್ ಚೇಂಬರ್ ಹೆಚ್ಚು ಆಳವಾಗಿಲ್ಲ. ತಾಯಿಯ ಹಾಲು ಮಗುವಿನ ಹೃದಯವನ್ನು ರಕ್ಷಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಅಂತಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಹಾರ್ಟ್ ಚೇಂಬರ್ ಸಣ್ಣದಾಗಿದ್ರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯಾಘಾತವಾಗುವ ಅಪಾಯ ಹೆಚ್ಚು. ಅವಧಿಗೆ ಮೊದಲೇ ಜನಿಸಿದ್ದರೂ ಮಗುವಿಗೆ ಎದೆ ಹಾಲನ್ನೇ ನೀಡುವುದರಿಂದ ಈ ಎಲ್ಲ ಅಪಾಯಗಳನ್ನು ತಪ್ಪಿಸಬಹುದು.
ಹಾರ್ಮೋನುಗಳ ನಿಯಂತ್ರಣ, ಮಗುವಿನ ಸೂಕ್ತ ಬೆಳವಣಿಗೆ, ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು, ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಮಗುವಿನ ಚಯಾಪಚಯವನ್ನು ಸುಧಾರಿಸುವುದು ಹೀಗೆ ತಾಯಿ ಹಾಲಿನಿಂದ ಹತ್ತಾರು ಪ್ರಯೋಜನಗಳಿವೆ.