ತ್ರಿಶೂರ್ : ಇಲ್ಲಿನ ಚಲಕುಡಿ ಬಳಿಯ ಪಾಲಪ್ಪಿಲ್ಲಿ ಗ್ರಾಮದಲ್ಲಿ ಗುರುವಾರ ಸೆಪ್ಟಿಕ್ ಟ್ಯಾಂಕ್’ಗೆ ಬಿದ್ದ ಗಂಡು ಆನೆ ಮರಿಯೊಂದು ನರಳಾಡಿ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಆನೆ ಸಾವನ್ನಪ್ಪಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಪ್ಟಿಕ್ ಟ್ಯಾಂಕ್’ ಒಳಗೆ ಬಿದ್ದಾಗ ಕುತ್ತಿಗೆಗೆ ಆದ ಗಾಯಗಳಿಂದಾಗಿ ಆನೆ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಬಹುದು” ಎಂದು ಅಧಿಕಾರಿ ಹೇಳಿದರು, ಸದ್ಯ, ಅರಣ್ಯ ಅಧಿಕಾರಿಗಳು ಆನೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
Kerala: Elephant calf fell into a septic tank in Palapilli Elikode Nagar, Trissur. Locals saw it around 8 am. Palapilli Range Forest officials reached the spot. pic.twitter.com/ikbmTQNTAq
— Pinky Rajpurohit 🇮🇳 (@Madrassan_Pinky) December 5, 2024