ಮೈಸೂರು : ಹುಲಿ ದಾಳಿಗೆ 7 ವರ್ಷದ ಬಾಲಕ ಮೃತಪಟ್ಟ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
2 ನೇ ತರಗತಿ ಓದುತ್ತಿದ್ದ 7 ವರ್ಷದ ಬಾಲಕ ಚರಣ್ ನಾಯಕ್ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಇಂದು ಸೋಮವಾರ ಚರಣ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ತಾಯಿಯನ್ನು ನೋಡಲು ಹೋಗಿದ್ದಾನೆ. ನಂತರ ತಂದೆ ತಾಯಿ ಬಿಸಿಲು ಇದ್ದ ಕಾರಣ ಮಗನನ್ನು ಒಂದು ಮರದ ಕೆಳಗೆ ಕೂರಿಸಿದ್ದಾರೆ. ನಂತರ ತಮ್ಮ ಕೆಲಸದಲ್ಲಿ ತೊಡಗಿದ್ದಾಳೆ. ಈ ವೇಳೆ ಹೊಂಚು ಹಾಕಿದ್ದ ವ್ಯಾಘ್ರ ಬಾಲಕನ ಮೇಲೆ ಎರಗಿದೆ. ಆದರೆ ಇದು ಪೋಷಕರ ಗಮನಕ್ಕೆ ಬಾರಲಿಲ್ಲ. ನಂತರ ಕ್ಷಣ ಮಾತ್ರದಲ್ಲಿ ಮಗ ಕಾಣಿಸಿಲ್ಲ ಎಂದು ಪೋಷಕರು ಮಗನನ್ನು ಹುಡುಕಾಡಿದ್ದು, ಮಗನ ಚಪ್ಪಲಿ ಹಾಗೂ ಹುಲಿ ಹೆಜ್ಜೆ ಇರುವುದು ಕಂಡು ಬಂದಿದೆ.
ಬಳಿಕ ಸ್ವಲ್ಪ ದೂರದಲ್ಲಿ ರಕ್ತದ ಮಡುವಿನಲ್ಲಿ ಚರಣ್ ಮೃತದೇಹ ಪತ್ತೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.