ಕೊರೊನಾ ಸೋಂಕಿಗೆ ಒಳಗಾಗಿದ್ದ 24 ವರ್ಷದ ಕೋವಿಡ್ ಲಸಿಕೆ ಪಡೆಯದ ಯುವಕ ಎರಡು ಶ್ವಾಸಕೋಶದ ಕಸಿಗೆ ಒಳಗಾಗಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ಪಡೆಯದಕ್ಕೆ ಪಶ್ಚಾತಾಪ ಅನುಭವಿಸಿದ್ದಾರೆ.
ಹೀಗಾಗಿ ತಾವು ಮಾಡಿದ ತಪ್ಪನ್ನ ಇನ್ಯಾರೂ ಮಾಡಬಾರದು ಎಂಬ ಕಾರಣಕ್ಕೆ ಬ್ಲೇಕ್ ಬಾರ್ಗೆಟ್ಜ್ ಹಾಗೂ ಆತನ ಕುಟುಂಬಸ್ಥರು ಲಸಿಕೆ ತೆಗೆದುಕೊಳ್ಳಿ ಎಂದು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತಿದ್ದಾರೆ.
ಫ್ಲೋರಿಡಾದ ನಿವಾಸಿಯಾದ ಬ್ಲೇಕ್ ಕೊರೊನಾ ಲಸಿಕೆಯನ್ನ ಸ್ವೀಕರಿಸಿರಲಿಲ್ಲ. ಈತನ ಕುಟುಂಬಸ್ಥರೆಲ್ಲರೂ ಲಸಿಕೆ ಪಡೆದಿದ್ದರೂ ಸಹ ಈತ ಮಾತ್ರ ಲಸಿಕೆ ಬಗ್ಗೆ ಒಲವು ತೋರಿರಲಿಲ್ಲ. ಆದರೆ ಏಪ್ರಿಲ್ ತಿಂಗಳಲ್ಲಿ ಬ್ಲೇಕ್ಗೆ ಕೊರೊನಾ ಸೋಂಕು ತಗುಲಿತ್ತು.
ಇದಾದ ಬಳಿಕ ಬರೋಬ್ಬರಿ ಮೂರು ತಿಂಗಳುಗಳ ಕಾಲ ಬ್ಲೇಕ್ ಫ್ಲೋರಿಡಾ ಹಾಗೂ ಜಾರ್ಜಿಯಾದಲ್ಲಿ ಮೂರು ಆಸ್ಪತ್ರೆಗಳನ್ನ ಬದಲಿಸಿದ್ದ. ಕೊನೆಗೂ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯಲ್ಲಿ ಐಸಿಯುಗೆ ದಾಖಲಾಗಿದ್ದ.
ನಾವು ಅನುಭವಿಸಿದ ಕಷ್ಟವನ್ನ ಮತ್ಯಾರೂ ಅನುಭವಿಸುವಂತೆ ಆಗಬಾರದು ಎಂದು ಬ್ಲೇಕ್ ತಾಯಿ ಚೆರೈಲ್ ನ್ಯೂಕ್ಲೋ ಕೂಡ ಹೇಳಿದ್ದಾರೆ.
ಬ್ಲೇಕ್ಗೆ ಮಧುಮೇಹ, ರಕ್ತದೊತ್ತಡ ಹೀಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಸಹ ಅವರು ಕೊರೊನಾದ ಗಂಭೀರ ಲಕ್ಷಣಗಳನ್ನ ಅನುಭವಿಸಿದ್ದಾರೆ. ಶ್ವಾಸಕೋಶದ ಕಸಿ ಮಾಡಿಸಿಕೊಳ್ಳುವ ಕೆಲವೇ ದಿನಗಳ ಮುನ್ನ ಬ್ಲೇಕ್ ಕೋವಿಡ್ ಲಸಿಕೆ ಸ್ವೀಕರಿಸಿದ್ದರು. ಅಲ್ಲದೇ ಕೊರೊನಾ ಲಸಿಕೆಯನ್ನ ಪಡೆಯಲು ಹಿಂಜರಿಯುವ ಕುಟುಂಬಗಳಿಗೂ ಬ್ಲೇಕ್ ಹಾಗೂ ಅವರ ಕುಟುಂಬ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಓಹಿಯೋದ ನಿವಾಸಿಯಾದ 25 ವರ್ಷದ ಬಾಣಸಿಗರೊಬ್ಬರು ಸಹ ಇದೇ ಸಮಸ್ಯೆಯನ್ನ ಎದುರಿಸಿದ್ದಾರೆ. ಲಸಿಕೆಯನ್ನ ಪಡೆಯದೇ ಕೊರೊನಾ ಸೋಂಕಿಗೆ ಒಳಗಾಗಿದ್ದ ಈತ ಸಹ ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತಾಯ್ತು. ಅಲ್ಲದೇ ಈತನ ಬಲಭಾಗದ ಶ್ವಾಸಕೋಶವನ್ನ ತೆಗೆದು ಹಾಕಲಾಗಿದೆ. ಈತನಿಗೂ ಸಹ ಎರಡು ಶ್ವಾಸಕೋಶ ಕಸಿಯ ಅವಶ್ಯಕತೆ ಇದೆ.