ಎಂದಿಗಿಂತ ಇಂದು ಹೆಚ್ಚಾಗಿ ಹೊಳೆಯಲಿದೆಯಂತೆ ಭೂಮಂಡಲ: ಇಲ್ಲಿದೆ ವದಂತಿ ಹಿಂದಿನ ಇಂಟ್ರೆಸ್ಟಿಂಗ್ ಮಾಹಿತಿ 08-07-2022 9:17AM IST / No Comments / Posted In: Latest News, Live News, International ಸೋಶಿಯಲ್ ಮೀಡಿಯದಾದಲ್ಲಿ ಇತ್ತೀಚೆಗೆ ಒಂದು ಸುದ್ದಿ ಓಡಾಡ್ತಿದೆ. ಆ ಸುದ್ದಿ ಏನಪ್ಪ ಅಂದ್ರೆ 8 ಜುಲೈ ಅಂದ್ರೆ ಇಂದು ಭೂಮಂಡಲ ಎಂದಿಗಿಂತ ಹೆಚ್ಚಾಗಿ ಹೊಳೆಯಲಿದೆ. ಅಷ್ಟೇ ಅಲ್ಲ ವಿಶ್ವದಲ್ಲಿರುವ ಸುಮಾರು 99% ಜನರಿಗೆ ಸೂರ್ಯನ ಶಾಖದ ಸುಖ ಪ್ರಾಪ್ತಿಯಾಗಲಿದೆಯಂತೆ. ಈ ಒಂದು ಸುದ್ದಿಯಲ್ಲಿ ಎಷ್ಟು ಸತ್ಯಾಂಶ ಇದೆ, ಇಲ್ಲ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡ್ತಿರುವುದರಿಂದ, ಇದರ ಬಗ್ಗೆ ಉತ್ಸುಕರಾಗಿದ್ದಾರೆ. ಈ ಸುದ್ದಿ ಏನಾದ್ರೂ ನಿಜ ಆಗಿದ್ದೇ ಆದ್ರೆ, ಏನಿಲ್ಲ ಅಂದರೂ 80 ಮಿಲಿಯನ್ ಜನರು ಕತ್ತಲಲ್ಲಿ ಕಳೆಯೋ ಹಾಗಾಗುತ್ತೆ. ಜೊತೆಗೆ 700 ಕೋಟಿಗೂ ಹೆಚ್ಚಿನ ಜನರು ಬಿಸಿಲನ್ನ ಕಾಯಿಸಿಕೊಳ್ಳುವ ಹಾಗಾಗುತ್ತೆ. Timeanddate.comನ ಒಂದು ತಂಡ ಇದರ ಸುದ್ದಿಯನ್ನ ಜಾಡು ಹಿಡಿದುಕೊಂಡು ಸತ್ಯಾಂಶ ಹೊರಗೆ ತೆಗೆಯುವುದಕ್ಕೆ ಪ್ರಯತ್ನಿಸುತ್ತಿದೆ. ಅಷ್ಟಕ್ಕೂ ಹೀಗೆ ಒಂದು ಊಹಾಪೋಹದ ಸುದ್ದಿಯನ್ನ ಹುಟ್ಟು ಹಾಕಿರೋದು Redditನಲ್ಲಿ ಹಾಕಲಾಗಿರುವ ಒಂದು ಪೋಸ್ಟ್. ಈ ಪೋಸ್ಟ್ ಕ್ಯಾಪ್ಷನ್ನಲ್ಲಿ “ಪ್ರತಿವರ್ಷ ಜುಲೈ 8ರಂದು ಬೆಳಿಗ್ಗೆ 11:15 AM, UTC (4:45 PM IST) ರಂದು ವಿಶ್ವದ ಸುಮಾರು 99.164 ಪ್ರತಿಶತ ಜನರು ಬೆಳಿಗ್ಗೆ ಮತ್ತು ಸಂಜೆಯ ನಡುವಿನ ಅಂತರವನ್ನ ಹೆಚ್ಚಾಗಿ ಅನುಭವಿಸುತ್ತಾರೆ. ಅವರಿಗೆಲ್ಲ ಹೆಚ್ಚಿನ ಸಮಯ ಹಗಲು ಇರುವ ಅನುಭವವಾಗುತ್ತೆ“ ಅಂತ ಬರೆದುಕೊಂಡಿದ್ದಾರೆ. ಯುರೋಪ್, ಅಮೆರಿಕಾ, ಆಫ್ರಿಕಾ ಹಾಗೂ ಏಷಿಯಾದಂತಹ ರಾಷ್ಟ್ರದಲ್ಲಿ ಸೂರ್ಯ ಪ್ರತಿದಿನಕ್ಕಿಂತ ಹೆಚ್ಚಿನ ಕಾಣಿಸಿಕೊಳ್ಳಲಿದ್ದಾನೆ. ಆದರೆ ಆಸ್ಟ್ರೇಲಿಯಾ, ದಕ್ಷಿಣ-ಪೂರ್ವ ಏಷಿಯಾ, ನ್ಯೂಜಿಲ್ಯಾಂಡ್ ಮತ್ತು ಅಂಟಾರ್ಟಿಕ್ನಲ್ಲಿ ಬೇಗನೆ ಕತ್ತಲೆ ಆವರಿಸಿಕೊಳ್ಳುವ ಸಾಧ್ಯತೆ ಇದೆ ಅಂತ ಕೂಡಾ ಹೇಳಲಾಗುತ್ತಿದೆ. Timeanddate.comನ ಇದರ ಬಗ್ಗೆ ಅಧ್ಯಯನ ಮಾಡಿ ನೋಡಿದಾಗ ಈ ಅಂಶದಲ್ಲಿ ಒಂದಷ್ಟು ಸತ್ಯ ಇದೆ ಅನ್ನೋದು ಗೊತ್ತಾಗಿದೆ. ಸೂರ್ಯ ತನ್ನ ಕಕ್ಷೆಯಿಂದ 11 ಡಿಗ್ರಿ ಕೆಳಗೆ ಚಲಿಸಲಿದ್ದಾನೆ. ಆ ಸಮಯದಲ್ಲಿ ಸೂರ್ಯನ ಕಿರಣಗಳು ಒಂದು ಹಂತಕ್ಕೆ ಕಡಿಮೆಯಾಗಿರುತ್ತೆ. ಅದು ಸಂಜೆಯ ಬಣ್ಣಕ್ಕೆ ಬದಲಾದಂತೆ ಕಾಣಿಸುತ್ತೆ. ಅದು ಒಂದು ರೀತಿ ರಾತ್ರಿಯಾದಂತೆ ಅನಿಸುತ್ತೆ. ಇದನ್ನ ಖಗೋಳ ಭಾಷೆಯಲ್ಲಿ ಟ್ವಿಲೈಟ್ನ್ ಅಂತ ಹೇಳಲಾಗುತ್ತೆ. ಪ್ರತಿ ದಿನ ರಾತ್ರಿಯಾಗುದರ ಹಿಂದೆ ಇರೋ ಕಾರಣ ಇದೇ ಈ ಟ್ವಿಲೈಟ್ನ್. ಇದೆಲ್ಲ ಈಗ ಅಧ್ಯಯನದಿಂದ ಬಹಿರಂಗವಾಗಿರುವ ವಿಚಾರವಾಗಿದೆ.