
ಸಭೆಯ ಕೆಲವು ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಭಾರತದ ಬೆಳವಣಿಗೆಗೆ ಅಡ್ವಾಣಿಯವರ ಕೊಡುಗೆ ಸ್ಮರಣೀಯ” ಎಂದು ಬಣ್ಣಿಸಿದ್ದಾರೆ.
ದೂರದರ್ಶನ ಹಂಚಿಕೊಂಡ ದೃಶ್ಯಗಳಲ್ಲಿ ಪ್ರಧಾನಿ ಮೋದಿ ಅಡ್ವಾಣಿಯವರ ಪುತ್ರಿ ಪ್ರತಿಭಾ ಅಡ್ವಾಣಿಯೊಂದಿಗೆ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಅಡ್ವಾಣಿಯವರಿಗೆ ಹೂಗುಚ್ಛ ನೀಡಿದ ಪ್ರಧಾನಿ ಮೋದಿ ನಂತರ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯವರಿಗೆ ಬಿಜೆಪಿಯ ಹಲವು ನಾಯಕರು ಸಹ ಶುಭಾಶಯ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು “ರಾಷ್ಟ್ರ ಮತ್ತು ಸಂಘಟನೆಗಾಗಿ ನಿಮ್ಮ ಜೀವನವು ನಮಗೆ ಸ್ಫೂರ್ತಿಯಾಗಿದೆ” ಎಂದು ಹೇಳಿದ್ದಾರೆ.
“ಅಡ್ವಾಣಿಯವರು ತಮ್ಮ ಅವಿರತ ಪ್ರಯತ್ನಗಳಿಂದ ದೇಶಾದ್ಯಂತ ಪಕ್ಷದ ಸಂಘಟನೆಯನ್ನು ಬಲಪಡಿಸಿದರು ಮತ್ತು ಸರ್ಕಾರದ ಭಾಗವಾಗಿದ್ದಾಗ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಎಲ್ ಕೆ ಅಡ್ವಾಣಿ, ಕಳೆದ ಮೂರು ದಶಕಗಳಲ್ಲಿ ಬಿಜೆಪಿಯ ಬೆಳವಣಿಗೆಯ ಹಿಂದಿನ ಪ್ರಮುಖ ಶಕ್ತಿಯಾಗಿ ಕಾಣುತ್ತಾರೆ. ಲೋಕಸಭೆಯಲ್ಲಿ ಕೇವಲ 2 ಸ್ಥಾನ ಹೊಂದಿದ್ದ ಬಿಜೆಪಿ 2014 ರಲ್ಲಿ ಸ್ವಂತ ಬಲದ ಮೇಲೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ರಚಿಸುವವರೆಗೆ ಬಿಜೆಪಿ ಪಕ್ಷಕ್ಕೆ ಅಡ್ವಾಣಿ ಅವರ ಕೊಡುಗೆ ಅಪಾರ.