ನವದೆಹಲಿ: ರೈಲ್ವೆ ಇಲಾಖೆಯ ಬರೋಬ್ಬರಿ 93 ಸಾವಿರ ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಹಾಗೂ ಸಿಇಒ ಸುನೀತ್ ಶರ್ಮಾ ಹೇಳಿದ್ದಾರೆ.
ಇಂಡಿಯನ್ ರೈಲ್ವೆ 72 ಆಸ್ಪತ್ರೆಗಳಲ್ಲಿ 5 ಸಾವಿರ ಬೆಡ್ ಗಳು ಇದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಗಳು ಅಗತ್ಯವಿಲ್ಲ. ಹೀಗಾಗಿ ಹಲವರು ಹೋಂ ಐಸೋಲೇಷನ್ ನಲ್ಲಿದ್ದಾರೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯ ಉದ್ಯೋಗಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಕಾರ್ಯಾಚರಣೆಗೆ ಸವಾಲಾಗಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಸರಕು ಸಾಗಾಣೆ ರೈಲುಗಳ ಸಂಚಾರ ಹೆಚ್ಚಾಗಿದೆ. ಲಭ್ಯವಿರುವ ಉದ್ಯೋಗಿಗಳಿಗೆ ಸರಿಯಾದ ವಿಶ್ರಾಂತಿ ನೀಡಿ ಸೇವೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.