alex Certify 93ನೇ ವಯಸ್ಸಿನಲ್ಲೂ ಬತ್ತದ ಉತ್ಸಾಹ; ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರತಿದಿನ 60 ಕಿಮೀ ಪ್ರಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

93ನೇ ವಯಸ್ಸಿನಲ್ಲೂ ಬತ್ತದ ಉತ್ಸಾಹ; ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರತಿದಿನ 60 ಕಿಮೀ ಪ್ರಯಾಣ

ಸಾಮಾನ್ಯವಾಗಿ ಉದ್ಯೋಗಿಗಳೆಲ್ಲ ನಿವೃತ್ತಿಗಾಗಿ ಕಾಯುತ್ತಾರೆ. ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ಕಳೆಯಲು ಬಯಸುತ್ತಾರೆ. ಆದರೆ 93ರ ಹರೆಯದಲ್ಲೂ ಪ್ರಾಧ್ಯಾಪಕಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೊಫೆಸರ್‌ ಶಾಂತಮ್ಮ ಈಗಲೂ ವಿದ್ಯಾದಾನ ಮಾಡುವ ಮೂಲಕ ಕರ್ತವ್ಯ ನಿರ್ವಹಣೆಯನ್ನು ಮುಂದುವರಿಸಿದ್ದಾರೆ. ವಿಶೇಷವೆಂದರೆ ಪ್ರತಿದಿನ ವೈಜಾಗ್‌ನಿಂದ ವಿಜಯನಗರಕ್ಕೆ 60 ಕಿಲೋಮೀಟರ್ ಪ್ರಯಾಣಿಸುತ್ತಾರೆ. ಶಾಂತಮ್ಮ ಆಂಧ್ರಪ್ರದೇಶದ ಸೆಂಚುರಿಯನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದಾರೆ.

ಪ್ರೊಫೆಸರ್ ಶಾಂತಮ್ಮ ಅವರ ತಾಯಿ ವನಜಾಕ್ಷಮ್ಮ ಅವರು 104 ವರ್ಷಗಳವರೆಗೆ ಬದುಕಿದ್ದರಂತೆ. ಇದು 93ರ ಹರೆಯದಲ್ಲೂ ದಣಿವಿಲ್ಲದೇ ಕೆಲಸ ಮಾಡುತ್ತಿರುವ ಪ್ರೊಫೆಸರ್‌ಗೆ ಸ್ಪೂರ್ತಿ. ವಿಶ್ವದ ಅತ್ಯಂತ ಹಿರಿಯ ಪ್ರಾಧ್ಯಾಪಕಿ ಎಂಬ ಗೌರವಕ್ಕೂ ಶಾಂತಮ್ಮ ಪಾತ್ರರಾಗಿದ್ದಾರೆ.

ಶಾಂತಮ್ಮ ಅವರು ಆಂಧ್ರ ವಿಶ್ವವಿದ್ಯಾನಿಲಯದಿಂದ ಮೈಕ್ರೊವೇವ್ ಸ್ಪೆಕ್ಟ್ರೋಸ್ಕೋಪಿಯಲ್ಲಿ ಭೌತಶಾಸ್ತ್ರ B.Sc ಆನರ್ಸ್ ಮತ್ತು D.Sc (PhD ಗೆ ಸಮಾನ) ಪದವಿ ಪಡೆದಿದ್ದಾರೆ. ತಮ್ಮ ಸುದೀರ್ಘ, ವಿಶಿಷ್ಟ ವೃತ್ತಿಜೀವನದಲ್ಲಿ ಪ್ರೊಫೆಸರ್ ಶಾಂತಮ್ಮ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಉಪನ್ಯಾಸಕರು, ಪ್ರಾಧ್ಯಾಪಕರು, ಓದುಗರು ಮತ್ತು ತನಿಖಾಧಿಕಾರಿಗಳೂ ಆಗಿದ್ದರು.

ಪ್ರೊಫೆಸರ್ ಶಾಂತಮ್ಮ ಅವರು ಪರಮಾಣು ಸ್ಪೆಕ್ಟ್ರೋಸ್ಕೋಪಿ ಮತ್ತು ಮಾಲಿಕ್ಯುಲರ್ ಸ್ಪೆಕ್ಟ್ರೋಸ್ಕೋಪಿಯ ವಿಶ್ಲೇಷಣೆಗಾಗಿ ಅನೇಕ ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016 ರಲ್ಲಿ ಹಿರಿಯ ವಿಜ್ಞಾನಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.ಇವರು ಉತ್ತಮ ಬರಹಗಾರರೂ ಹೌದು. ಪುರಾಣಗಳು, ವೇದಗಳು ಮತ್ತು ಉಪನಿಷತ್ತುಗಳ ಮೇಲೆ ‘ಭಗವದ್ಗೀತೆ – ದಿ ಡಿವೈನ್ ಡೈರೆಕ್ಟಿವ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...