ಕೋಲ್ಕತಾ: ಕತಾರ್ನಲ್ಲಿ ನಡೆಯುತ್ತಿರುವ ಈ ವರ್ಷದ ಫಿಫಾ ವಿಶ್ವಕಪ್ ಫುಟ್ಬಾಲ್ ಹುಚ್ಚು ಕೋಲ್ಕತಾದಲ್ಲಿ ಅಭೂತಪೂರ್ವವಾಗಿ ಕಂಡುಬಂದಿದೆ. ಸುಮಾರು 9,000 ಅಭಿಮಾನಿಗಳು ಈಗಾಗಲೇ ಪ್ರದರ್ಶನವನ್ನು ವೀಕ್ಷಿಸಲು ಕತಾರ್‌ಗೆ ಪ್ರಯಾಣಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನವರು ಮುಂದಿನ ಕೆಲವು ದಿನಗಳಲ್ಲಿ ಆಗಮಿಸಲಿದ್ದಾರೆ.
ಕತಾರ್‌ಗೆ ಟಿಕೆಟ್, ವಸತಿ ಲಭ್ಯತೆ ಮತ್ತು ಪ್ರಯಾಣ ಪ್ಯಾಕೇಜ್‌ಗಳ ಕುರಿತು ಜನರು ಇನ್ನೂ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ, ಸೆಮಿಫೈನಲ್‌ಗಳು ಮತ್ತು ಮುಂದಿನ ವಾರದ ಅಂತಿಮ ಪಂದ್ಯಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಕೋಲ್ಕತಾದಿಂದ ಸುಮಾರು 9,000 ಜನರನ್ನು ಒಳಗೊಂಡಂತೆ ಸುಮಾರು 10,000-12,000 ಫುಟ್ಬಾಲ್ ಅಭಿಮಾನಿಗಳು ಪೂರ್ವ ಭಾರತದಿಂದ ಕತಾರ್‌ಗೆ ಪ್ರಯಾಣಿಸಿದ್ದಾರೆ. ಜನರು ಸೆಮಿಫೈನಲ್ ಮತ್ತು ಫೈನಲ್‌ಗೆ ಹೋಗಲು ಉತ್ಸುಕರಾಗಿದ್ದಾರೆ” ಎಂದು ಟ್ರಾವೆಲ್ ಏಜೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (TAFI) ಪೂರ್ವ ವಲಯದ ಮುಖ್ಯಸ್ಥ ಅನಿಲ್ ಪಂಜಾಬಿ ಹೇಳಿದ್ದಾರೆ.
ಅರ್ಜೆಂಟೀನಾ ಸೆಮಿಫೈನಲ್‌ಗೆ ಹೋಗುತ್ತಿರುವ ಕಾರಣ ಅದನ್ನು ಹುರಿದುಂಬಿಸಲು ಫುಟ್ಬಾಲ್ ಅಭಿಮಾನಿಗಳು ಕಾತರರಾಗಿದ್ದಾರೆ ಎನ್ನಲಾಗಿದೆ.