ಇದ್ದಕ್ಕಿದ್ದ ಹಾಗೆ ನಿಮ್ಮ ಖಾತೆಗೆ ಕೋಟಿ ಕೋಟಿ ಹಣ ಜಮಾ ಆದರೆ..ನೀವು ಏನು ಮಾಡುತ್ತೀರಿ. ನಿಮ್ಮ ಸಂತೋಷಕ್ಕೆ ಪಾರವೇ ಇರಲ್ಲ. ಬೇಗ ಬೇಗ ನಿಮ್ಮ ಕಮಿಟ್ ಮೆಂಟ್ ಗಳನ್ನೆಲ್ಲಾ ಮುಗಿಸಿಕೊಳ್ಳುತ್ತೀರಿ. ಅದೇ ರೀತಿ ತಮಿಳುನಾಡಿನ ಕಾರು ಚಾಲಕನ ಖಾತೆಗೆ 9 ಸಾವಿರ ಕೋಟಿ ಹಣ ಬಂದಿದ್ದು, ಆದರೆ ಅವರ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ.
ತಮಿಳುನಾಡಿನಲ್ಲಿ ಕಾರು ಚಾಲಕನಾಗಿರುವ ರಾಜ್ ಕುಮಾರ್ ಎಂಬುವವರ ಅವರ ಖಾತೆಗೆ ಇದ್ದಕ್ಕಿದ್ದಂತೆ 9,000 ಕೋಟಿ ರೂ. ಬಂದಿದೆ. ಕೂಡಲೇ ಚಾಲಕ ಈ ಮೊತ್ತದಿಂದ 21,000 ರೂ.ಗಳನ್ನು ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿದ್ದಾನೆ.ಆದಾಗ್ಯೂ, ಅವನ ಸಂತೋಷವು ಹೆಚ್ಚು ಕಾಲ ಉಳಿಯಲಿಲ್ಲ. ಬ್ಯಾಂಕ್ ತಪ್ಪಾಗಿ ಅವರ ಖಾತೆಗೆ ಕಳುಹಿಸಿದ ಈ ಮೊತ್ತವನ್ನು ಕಡಿತಗೊಳಿಸಿದೆ.
ಪಳನಿ ನಿವಾಸಿ ರಾಜ್ ಕುಮಾರ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕೋಡಂಬಕ್ಕಂನಲ್ಲಿ ವಾಸಿಸುತ್ತಿದ್ದು, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟಂಬರ್ 9ರಂದು ರಾಜ್ ಕುಮಾರ್ ಅವರ ಖಾತೆಗೆ 9,000 ಕೋಟಿ ಹಣ ಬಂದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ರಾಜ್ ಕುಮಾರ್ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾರೆ. ಆ ಸಮಯದಲ್ಲಿ ಅವರ ಖಾತೆಯಲ್ಲಿ ಕೇವಲ 105 ರೂಪಾಯಿಗಳಿದ್ದವು. ಅಂತಹ ಪರಿಸ್ಥಿತಿಯಲ್ಲಿ ಅವರ ಖಾತೆಗೆ 9 ಸಾವಿರ ಕೋಟಿ ಹಣ ಬಂದಿದೆ. ಆದ್ದರಿಂದ ಚಾಲಕ 21,000 ರೂ.ಗಳನ್ನು ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿದ್ದಾರೆ.
ಆದರೆ, ಸ್ವಲ್ಪ ಸಮಯದ ನಂತರ, ಬ್ಯಾಂಕ್ ಅಧಿಕಾರಿಗಳು ರಾಜ್ ಕುಮಾರ್ ಅವರನ್ನು ಸಂಪರ್ಕಿಸಿ, ಹಣವನ್ನು ತಪ್ಪಾಗಿ ನಿಮ್ಮ ಖಾತೆಗೆ ವರ್ಗಾಯಿಸಲಾಗಿದೆ, ಈ ಹಣವನ್ನು ಯಾರಿಗೂ ವರ್ಗಾಯಿಸದಂತೆ ಬ್ಯಾಂಕ್ ಸಿಬ್ಬಂದಿ ರಾಜ್ ಕುಮಾರ್ ಗೆ ಸೂಚಿಸಿದರು. ಸ್ವಲ್ಪ ಸಮಯದ ನಂತರ, ಬ್ಯಾಂಕ್ ಈ ಹಣವನ್ನು ಮತ್ತೆ ಕಡಿತಗೊಳಿಸಿತು. ಸ್ನೇಹಿತನಿಗೆ ಕಳುಹಿಸಿದ 21,000 ರೂ.ಗಳನ್ನು ಹಿಂದಿರುಗಿಸುವಂತೆ ಬ್ಯಾಂಕ್ ಆಡಳಿತ ಮಂಡಳಿ ರಾಜ್ ಕುಮಾರ್ ಅವರನ್ನು ಕೇಳಿದೆ ಎಂದು ಹೇಳಲಾಗುತ್ತಿದೆ.