ಬರೋಬ್ಬರಿ 35 ವರ್ಷಗಳ ನಂತರ ತನ್ನ ಪತಿಯ ಮದುವೆಯ ಉಂಗುರ 90 ವರ್ಷದ ವೃದ್ಧೆಗೆ ಮರಳಿ ದೊರೆತಿದೆ. ಇದು ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿರುವ ಕಾರ್ನ್‌ವಾಲ್ ಕೌಂಟಿಯ 90 ವರ್ಷದ ವೃದ್ಧೆ, ಕಳೆದ ಮೂವತ್ತೈದು ವರ್ಷಗಳ ನಂತರ ತನ್ನ ಮೃತಪಟ್ಟ ಗಂಡನ ಉಂಗುರವನ್ನು ಕಂಡುಕೊಂಡಿದ್ದಾಳೆ. ಇದರಿಂದ ಆಕೆಗೆ ಆಶ್ಚರ್ಯದ ಜೊತೆಗೆ, ಅಷ್ಟೇ ಸಂತೋಷಗೊಂಡಿದ್ದಾಳೆ.
ವೃದ್ಧೆ ಆನ್ ಕೆಂಡ್ರಿಕ್ ಉದ್ಯಾನದಲ್ಲಿ ಸಮಯವನ್ನು ಕಳೆಯುತ್ತಿದ್ದರು. ಸೇಬಿನ ಮರದ ಬುಡವನ್ನು ತೆರವುಗೊಳಿಸುತ್ತಿದ್ದಾಗ, ಹುಲ್ಲನ್ನು ತೆಗೆಯುವಾಗ ವಸ್ತುವೊಂದು ಸಿಕ್ಕಿದೆ. ಆರಂಭದಲ್ಲಿ ಇದು ಲೋಹದ ತುಂಡು ಅಂತಾನೇ ಆಕೆ ಭಾವಿಸಿದ್ದಳು. ಅದನ್ನು ಮತ್ತಷ್ಟು ಪರಿಶೀಲಿಸಿದಾಗ, 1987 ರಲ್ಲಿ ತೋಟದಲ್ಲಿ ಕೆಲಸ ಮಾಡುವಾಗ ತನ್ನ ಪತಿ ಪೀಟರ್ ಕಳೆದುಕೊಂಡ ಉಂಗುರವಿದು ಎಂದು ತಿಳಿದಾಗ ಆಕೆಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.
ಏಳು ಮಕ್ಕಳ ತಾಯಿಯಾದ ಆನ್, 22 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಸಮಯದ ನಂತರ ತನ್ನ ಗಂಡನ ಕಳೆದುಹೋದ ಉಂಗುರವನ್ನು ನೋಡಿ ಆನ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.
ಹಾನಿಗೊಳಗಾದ ಉಂಗುರವನ್ನು ಸರಿಪಡಿಸಲು ಆನ್ ಯೋಜಿಸಿದ್ದಾಳೆ. ಉಂಗುರಕ್ಕೆ ಮತ್ತೆ ಹೊಸ ರೂಪ ಕೊಟ್ಟು, ಆನ್ ತನ್ನ ದಿವಂಗತ ಪತಿಯ ನೆನಪಿಗಾಗಿ ಧರಿಸಲು ನಿರ್ಧರಿಸಿದ್ದಾಳೆ.