alex Certify ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ದನಿಗೆ ಲಕ್ಷ ರೂ. ನೀಡಿದ ಪೊಲೀಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ದನಿಗೆ ಲಕ್ಷ ರೂ. ನೀಡಿದ ಪೊಲೀಸ್‌ ಅಧಿಕಾರಿ

ಮೊಳಕೆ ಕಾಳನ್ನು ಮಾರಿ ತಮ್ಮ ಅಂತ್ಯಕ್ರಿಯೆಗಾಗಿ ಹಣ ಕೂಡಿಟ್ಟಿದ್ದ ವೃದ್ಧನ ಉಳಿತಾಯದ ಮೊತ್ತವನ್ನು ಕಳ್ಳರು ಲೂಟಿ ಮಾಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಶ್ರೀನಗರದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಕೈನಿಂದ ಹಣ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ರಸ್ತೆ ಬದಿಯಲ್ಲಿ ಕಡಲೆಕಾಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅಬ್ದುಲ್​ ರೆಹಮಾನ್​ರ ಉಳಿತಾಯದ ಹಣವನ್ನು ಕಳ್ಳರು ಲೂಟಿ ಮಾಡಿದ್ದರು. ಅವರು ತಮ್ಮ ಅಂತ್ಯಕ್ರಿಯೆಗಾಗಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ .

ರೆಹಮಾನ್​ಗೆ ಥಳಿಸಿದ ಕಳ್ಳರು, 1 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಕದ್ದು ಪರಾರಿಯಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್​ ಚೌಧರಿ ವೃದ್ಧನ ನೆರವಿಗೆ ಧಾವಿಸಿದ್ದಾರೆ.

ಪೊಲೀಸ್​ ಅಧಿಕಾರಿ, ರೆಹಮಾನ್​ಗೆ ತಮ್ಮ ಕೈನಿಂದ​ 1 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಇದರಿಂದ ವೃದ್ಧನ ಮುಖದಲ್ಲಿ ನಗು ಮೂಡಿದೆ. ಸಂದೀಪ್​ರ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Her er det Hvor er de 9 Smarte Tip fra Bedstemor til at Fjerne Fejl i parken: Hvordan vælger du kaffebønner: 3