ನಿಕೋಲಾ ಚುಮಕ್ ಹಾಗೂ ಪತಿ ಪೀಟರ್ ಚುಮಕ್ ಮೂಲತಃ ಉಕ್ರೇನ್ನವರಾದರೂ ಸಹ ಅವರು ಹೆಚ್ಚಾಗಿ ಬ್ರಿಟನ್ನಲ್ಲಿಯೇ ವಾಸವಿದ್ದರು. ಫೆಬ್ರವರಿ ಅಂತ್ಯದಲ್ಲಿ ಪೀಟರ್ ತಮ್ಮ ಪೋಷಕರನ್ನು ಭೇಟಿಯಾಗಲು ಉಕ್ರೇನ್ಗೆ ಆಗಮಿಸಿದ ಬಳಿಕ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಫೆಬ್ರವರಿ 24ರ ರಾತ್ರಿ 10:30ರ ಸುಮಾರಿಗೆ ಪೀಟರ್ ಉಕ್ರೇನ್ಗೆ ಬಂದಿಳಿದರು. ದುರಾದೃಷ್ಟವಶಾತ್ ಪೀಟರ್ ಉಕ್ರೇನ್ಗೆ ಬಂದಿಳಿಯುವುದು 90 ನಿಮಿಷ ತಡವಾಯ್ತು. ಉಕ್ರೇನ್ ರಾತ್ರಿ 9 ಗಂಟೆ ಸುಮಾರಿಗೆ ಸಮರ ಕಾನೂನನ್ನು ಜಾರಿಗೊಳಿಸಿತ್ತು. ಇದು 18 ರಿಂದ 60 ವರ್ಷ ಪ್ರಾಯದ ಉಕ್ರೇನ್ ಪೌರತ್ವವನ್ನು ಹೊಂದಿರುವ ಪುರುಷರು ದೇಶವನ್ನು ತೊರೆಯುವುದನ್ನು ನಿಷೇಧಿಸಿತು.
ಬ್ರಿಟನ್ನಲ್ಲಿ ವಾಸವಿದ್ದರೂ ಸಹ ಉಕ್ರೇನ್ನ ಪ್ರಜೆಯೇ ಆಗಿರುವ ಪೀಟರ್ ತನ್ನ ಪೋಷಕರ ಜೊತೆ ಒಂದು ವಾರ ಸಮಯವನ್ನು ಕಳೆಯಲು ಯೋಜಿಸಿದ್ದರು. ಆದರೆ ರಷ್ಯಾದ ಆಕ್ರಮಣ ಆರಂಭವಾದ ಹಿನ್ನೆಲೆಯಲ್ಲಿ ಅವರಿಗೆ ಉಕ್ರೇನ್ನಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಬ್ರಿಟನ್ನಲ್ಲಿರುವ ಅವರ ಪತ್ನಿ ಹಾಗೂ ಸ್ನೇಹಿತರು ಹೇಗಾದರೂ ಮಾಡಿ ಪೀಟರ್ನನ್ನು ಉಕ್ರೇನ್ನಿಂದ ಹೊರತರಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.
ಉಕ್ರೇನ್ ಇಷ್ಟು ಧಿಡೀರ್ ಎಂದು ತನ್ನ ಕಾನೂನನ್ನೇ ಬದಲಾಯಿಸುತ್ತದೆ ಎಂದು ನಾವು ಊಹಿಸಿಯೂ ಇರಲಿಲ್ಲ ಎಂದು ಪೀಟರ್ ಪತ್ನಿ ನಿಕೋಲಾ ಹೇಳಿದ್ದಾರೆ.