alex Certify ‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ನೆಟ್ಟಿಗರ ಮನ ಗೆದ್ದ ಪುಟ್ಟ ಬಾಲಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ನೆಟ್ಟಿಗರ ಮನ ಗೆದ್ದ ಪುಟ್ಟ ಬಾಲಕಿ….!

ಸದ್ಯ ಸೋಶಿಯಲ್​ ಮೀಡಿಯಾದ ಸೆನ್ಸೇಷನ್​ ಎನಿಸಿರುವ ಮಾನಿಕೆ ಮಾಗೆ ಹಿತೆ ಹಾಡು ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಶ್ರೀಲಂಕಾ ಗಾಯಕಿ ಯೋಹಾನಿ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡು ಈಕೆಯನ್ನು ರಾತ್ರೋರಾತ್ರಿ ಫೇಮಸ್​ ಮಾಡಿದ್ದಂತೂ ಸುಳ್ಳಲ್ಲ. ಇದಾದ ಬಳಿಕ ಅನೇಕರು ಈ ಹಾಡನ್ನು ತಮ್ಮ ಕಂಠಸಿರಿಯಲ್ಲಿ ಹಾಡುವ ಪ್ರಯತ್ನವನ್ನ ಮುಂದುವರಿಸಿದ್ದಾರೆ.

ಅದೇ ರೀತಿ ಸರೆಗಮಪ ಮರಾಠಿ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದ ಪಾಲಾಕ್ಷಿ ದೀಕ್ಷಿತ್​ ಎಂಬ ಹೆಸರಿನ 9 ವರ್ಷದ ಬಾಲಕಿ ಕೂಡ ಈ ಹಾಡನ್ನು ಅದ್ಭುತವಾಗಿ ಹಾಡಿದ್ದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಹಾಡನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಿದ್ದಂತೆ ಲೈಕ್ಸ್​ ಹಾಗೂ ಕಮೆಂಟ್​ಗಳ ಸುರಿಮಳೆಯೇ ಹರಿದಿದೆ.

ಸಿಂಹಳ ಗೀತೆಯಾದ ಮಾನಿಕೆ ಮಾಗೆ ಹಿತೆಯನ್ನು 2020ರಲ್ಲಿ ಸತೀಶನ್​ ರತ್ನಯಕ ಮೊದಲು ಹಾಡಿದ್ದರು. ಇದಾದ ಬಳಿಕ ಮೇ ತಿಂಗಳಲ್ಲಿ ಯೋಹಾನಿ ದಿಲೋಕೆ ಕಂಠಸಿರಿಯಲ್ಲಿ ಮೂಡಿ ಬಂದ ಈ ಹಾಡು ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿತ್ತು.

https://www.instagram.com/tv/CU5YfsRhnX9/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...