ಚಾಮರಾಜನಗರ: 9 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದು, ಬಾಲಕಿ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ತಮಿಳುನಾಡಿನ ಆರಮಂಗಲ ಗ್ರಾಮದ ವೆಟ್ರಿವಲ್ (28) ಅತ್ಯಾಚಾರವೆಸಗಿರುವ ಆರೋಪಿ. ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಕೊಳ್ಳೆಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾವಿ ತೋಡುವ ಕೆಲಸಕ್ಕೆಂದು ಬಂದಿದ್ದ ವೆಟ್ರಿವಲ್ ಬಾಲಕಿಯನ್ನು ಪುಸಲಾಯಿಸಿ ನೀಚಕೃತ್ಯವೆಸಗಿದ್ದಾನೆ. ಬಾಲಕಿಯ ತಂದೆ ಆಕೆಯನ್ನು ಹುಡುಕಿಕೊಂಡು ಬರುವುದನ್ನು ಕಂಡು ಆರೋಪಿ ಪರಾರಿಯಾಗಿದ್ದಾನೆ.
ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.