
ಅಮೆರಿಕದ ಪೆನ್ಸಿಲ್ವೇನಿಯಾದ ಒಂಬತ್ತು ವರ್ಷದ ಹುಡುಗ ಈಗಾಗಲೇ ಕಾಲೇಜಿಗೆ ಪ್ರವೇಶಿಸಿದ್ದಾನೆ. ರೀಚ್ ಸೈಬರ್ ಚಾರ್ಟರ್ ಶಾಲೆಯಿಂದ ಪದವಿ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿ ಎನಿಸಿದ್ದಾನೆ. ಬಕ್ಸ್ ಕೌಂಟಿ ಕಾಲೇಜಿನಲ್ಲಿ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದ್ದಾನೆ ಎಂದು ಎಬಿಸಿ ವರದಿ ತಿಳಿಸಿದೆ.
ಡೇವಿಡ್ ಬಾಲೋಗುನ್ ವಿವಿಧ ವಿಷಯಗಳನ್ನು ಅಧ್ಯಯನ ಮಾಡಿದ್ದಾನೆ. ಬೇಗನೆ ಪದವಿ ಪಡೆಯಲು ಬಯಸಿದ್ದರಿಂದ ವಿವಿಧ ವಿಷಯಗಳ ಅಧ್ಯಯನ ನಡೆಸಿದ್ದಾನೆ. ಆದರೆ ಶಿಕ್ಷಕರು ಮೂರನೇ ನಂತರ ನಾಲ್ಕನೇ ತರಗತಿಯತ್ತ ಗಮನಹರಿಸುವಂತೆ ಹೇಳಿದ್ದು, 10ನೇ ವಯಸ್ಸಿನಲ್ಲಿ ಪದವೀಧರರಾಗಬೇಕೆಂದು ನಿರ್ಧರಿಸಿದ್ದ. ಅದರಂತೆಯೇ ಆತನ ಜಾಣ್ಮೆಯನ್ನು ನೋಡಿ ಪ್ರಮೋಷನ್ ನೀಡಲಾಗಿದೆ.
ಬಕ್ಸ್ ಕೌಂಟಿ ಖಗೋಳ ಭೌತಶಾಸ್ತ್ರಜ್ಞನಾಗಬೇಕೆಂದು ಕನಸು ಕಾಣುತ್ತಿದ್ದಾನೆ. ಈತ ಕಪ್ಪು ಕುಳಿಗಳು, ಸೂಪರ್ನೋವಾಗಳಿಂದ ಆಸಕ್ತಿ ಹೊಂದಿದ್ದಾನೆ. ಬಾಲ್ಯದಲ್ಲಿಯೇ ಈತ ಹಲವಾರು ವಿಷಯಗಳ ಕುರಿತು ಆಸಕ್ತಿ ವಹಿಸಿರುವ ಕುರಿತು ಈತನ ತಾಯಿ ಮಾಹಿತಿ ನೀಡಿದ್ದಾರೆ.