ಭಾರತೀಯ ಮೂಲದ 9 ವರ್ಷದ ಬಾಲಕಿಯೊಬ್ಬಳು ಆಪಲ್ ಕಂಪನಿಯ ಐಫೋನ್ ಗಳಿಗೆ ಐಒಎಸ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಇವಳ ಈ ಸಾಧನೆಗೆ ಸ್ವತಃ ಆಪಲ್ ಕಂಪನಿ ಸಿಇಒ ಟಿಮ್ ಕುಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಗಳ ಪುತ್ರಿ ಹನಾ ಮಹಮ್ಮದ್ ರಫೀಕ್ ಇಂಥದೊಂದು ಮಹತ್ತರ ಸಾಧನೆ ಮಾಡಿದ್ದು, ಆಪ್ ಅಭಿವೃದ್ಧಿ ಬಳಿಕ ಈ ಕುರಿತಂತೆ ಆಪಲ್ ಕಂಪನಿಗೆ ಇ ಮೇಲ್ ಕಳಿಸಿದ್ದಳು. ಅಲ್ಲದೆ ಆಪ್ ಕುರಿತು ವಿಸ್ತೃತವಾಗಿ ವಿವರಣೆ ನೀಡಿದ್ದಳು.
ಇದನ್ನು ಪರಿಶೀಲಿಸಿದ ಬಳಿಕ ಆಪಲ್ ಕಂಪನಿಯಿಂದ ಅಭಿನಂದನಾ ಇಮೇಲ್ ಬಂದಿದ್ದು, ಸಿಇಓ ಟಿಮ್ ಕುಕ್ ಅಭಿನಂದಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ನಿನಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದ್ದಾರೆ. ಹನಾ ತಂದೆ ಮಹಮ್ಮದ್ ರಫೀಕ್ ಮಗಳ ಈ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅವರ ಮತ್ತೋರ್ವ ಪುತ್ರಿ ಹತ್ತು ವರ್ಷದ ಲೀನಾ ಫಾತಿಮಾ ಕೋಡ್ ಬರೆಯುವಲ್ಲಿ ಸಹೋದರಿಗೆ ನೆರವು ನೀಡಿದ್ದಳು ಎಂದಿದ್ದಾರೆ.