ಕಾರ್ಕಳ: ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ಸೀರೆ ಬಿಗಿದುಕೊಂಡು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಸಮೀಪ ನಡೆದಿದೆ.
ಅಂತೊಟ್ಟು ನಿವಾಸಿ ಲಕ್ಷ್ಮಣ ಪೂಜಾರಿ ಅವರ ಪುತ್ರಿ ಮಾನ್ವಿ ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ಶುಕ್ರವಾರ ಸಂಜೆ ಚಿಕ್ಕಪ್ಪನ ಮನೆಯ ಆವರಣದಲ್ಲಿ ಸೀರೆ ಕಟ್ಟಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸೀರೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.