ನೈಜೀರಿಯಾದ 9 ವರ್ಷದ ಬಾಲಕ ಅದಾಗಲೇ ತನ್ನ ಸ್ವಂತ ಸೂಪರ್ ಕಾರ್‌ಗಳು, ಖಾಸಗಿ ಜೆಟ್ ಮತ್ತು 6ನೇ ವಯಸ್ಸಿನಲ್ಲಿಯೇ ಸಂಪೂರ್ಣ ಅಲಂಕೃತವಾದ ಮಹಲುಗಳೊಂದಿಗೆ ಭಾರೀ ಸಿರಿವಂತ ಜೀವನವನ್ನು ನಡೆಸುತ್ತಿದ್ದಾನೆ.
ಎಡ್ಡಿ ಮರ್ಫಿ ನಟಿಸಿದ 1988 ರ ಹಾಸ್ಯಚಿತ್ರ ‘ಕಮಿಂಗ್ ಟು ಅಮೇರಿಕಾ’ ಅನ್ನು ನೀವು ನೋಡಿದ್ದರೆ, ಈ ಕಥೆಯು ಪ್ರಿನ್ಸ್ ಅಕೀಮ್ ಮತ್ತು ಅವರ ಕುಟುಂಬದ ಕಾಲ್ಪನಿಕ ಕಥೆಯ ನೈಜ-ಜೀವನದ ನಿರೂಪಣೆಯಾಗಿರಬಹುದು ಎಂದು ನೀವು ಅಂದುಕೊಳ್ಳಬಹುದು.
ʼಗಗನಸಖಿʼಯರು ತರಬೇತಿ ವೇಳೆ ಮಾಡಬೇಕು ಈ ಎಲ್ಲ ಕೆಲಸ……!
ಮೊಂಫಾ ಜೂನಿಯರ್ ಎಂಬ ಹೆಸರಿನ ಮೂಲಕ ಪ್ರಸ್ತುತನಾಗಿರುವ ಮುಹಮ್ಮದ್ ಅವಲ್ ಮುಸ್ತಫಾ ನೈಜೀರಿಯಾದ ಒಬ್ಬ ಮಿಲಿಯನೇರ್ ಇಂಟರ್ನೆಟ್ ಸೆಲೆಬ್ರಿಟಿ ಇಸ್ಮಾಯಿಲಿಯಾ ಮುಸ್ತಫಾ ಅವರ ಪುತ್ರ. ಮೊಂಫಾ ಸೀನಿಯರ್ ಮತ್ತು ಜೂನಿಯರ್ ಎಂಬ ಹೆಸರಿನಲ್ಲಿ ಅಪ್ಪ-ಮಗ ಖ್ಯಾತರಾಗಿದ್ದಾರೆ.
ಇಸ್ಮಾಯಿಲಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ 1.1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರೆ, ಅವರ ಮಗ ಈಗಾಗಲೇ ಕೇವಲ 9 ಪೋಸ್ಟ್‌ಗಳೊಂದಿಗೆ 26 ಸಾವಿರ ಅನುಯಾಯಿಗಳನ್ನು ತಲುಪಿದ್ದಾನೆ.
ಸೀಮಿತ ಸಂಖ್ಯೆಯ ಪೋಸ್ಟ್‌ಗಳಲ್ಲಿ, ಈ ಪೋರ ತನ್ನ ಸೂಪರ್‌ಕಾರ್‌ಗಳ ಪಕ್ಕದಲ್ಲಿ ನಿಂತು ಸೊಗಸಾದ ಬಟ್ಟೆಗಳನ್ನು ಧರಿಸುವುದನ್ನು ಕಾಣಬಹುದು. ಮತ್ತೊಂದು ಫೋಟೋ ಆತ ತನ್ನ ಖಾಸಗಿ ಜೆಟ್‌ನಲ್ಲಿ ಊಟ ಮಾಡುತ್ತಿರುವುದನ್ನು ತೋರಿಸುತ್ತದೆ.
ದಿ ಸನ್‌ನ ವರದಿಯ ಪ್ರಕಾರ, ಮೊಂಫಾ ಸೀನಿಯರ್ 2018 ರಲ್ಲಿ ತನ್ನ ಆರನೇ ಹುಟ್ಟುಹಬ್ಬಕ್ಕಾಗಿ ಮೊಂಫಾ ಜೂನಿಯರ್ ಅವರ ಮೊದಲ ಮಹಲು ಖರೀದಿಸಿದರು.
ಇನ್‌ಸ್ಟಾಗ್ರಾಮ್‌ನಲ್ಲಿರುವ ಫೋಟೋಗಳಲ್ಲಿ ಅವರು ಲಾಗೋಸ್ ಮತ್ತು ಯುಎಇ ನಡುವೆ ಓಡಾಡುತ್ತಿರುವುದನ್ನು ತೋರಿಸುತ್ತವೆ, ಚೀಲಗಟ್ಟಲೇ ಹಣವನ್ನು ಇಟ್ಟುಕೊಂಡು ಸೂಪರ್ ಕಾರ್ ಗಳನ್ನು ಓಡಿಸುತ್ತಾ ಅದ್ಧೂರಿ ಹೋಟೆಲ್‌ಗಳಲ್ಲಿ ವಾಸಿಸುತ್ತಾರೆ ಈ ಇಬ್ಬರು.
ಆದರೆ ಇವರ ಕುಟುಂಬಕ್ಕೆ ಎಲ್ಲವೂ ಸುಖಮಯವಾಗಿಲ್ಲ. ದಿ ಸನ್‌ನ ವರದಿಯು £10 ಮಿಲಿಯನ್‌ಗಿಂತಲೂ ಹೆಚ್ಚು ಕಪ್ಪುಹಣದ ಆರೋಪದ ಮೇಲೆ ಮೊಂಫಾ ಸೀನಿಯರ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ನ್ಯಾಯಾಂಗ ವಿಚಾರಣೆಗಾಗಿ ಕಾಯುತ್ತಿರುವಾಗ ಈತನನ್ನು ಬಂಧನದಲ್ಲಿರಿಸಲಾಯಿತಾದರೂ ಆದರೆ ಭಾರಿ ಮೊತ್ತದ ಹಣಕ್ಕಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈತ ಲಾಗೂಸ್‌ನ ಬ್ಯೂರೋ ಡಿ ಚೇಂಚ್ ವಹಿವಾಟಿನಿಂದ ಸಿರಿವಂತನಾಗಿದ್ದು, ಬಳಿಕ ಹೂಡಿಕೆಗಳ ಬಲದಿಂದ ತನ್ನ ಸಂಪತ್ತು ವರ್ಧಿಸಿಕೊಂಡಿದ್ದಾನೆ.