alex Certify ಒಂದೇ ಕುಟುಂಬದ 9 ಮಂದಿ ಘರ್ ವಾಪಸಿ; ಮಾತೃ ಧರ್ಮಕ್ಕೆ ಮರಳಿದ ಮತಾಂತರಗೊಂಡಿದ್ದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕುಟುಂಬದ 9 ಮಂದಿ ಘರ್ ವಾಪಸಿ; ಮಾತೃ ಧರ್ಮಕ್ಕೆ ಮರಳಿದ ಮತಾಂತರಗೊಂಡಿದ್ದ ಕುಟುಂಬ

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಒಂದೇ ಕುಟುಂಬದ 9 ಸದಸ್ಯರು ಮರುಮತಾಂತರಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಅಂತರಗಂಗೆಯಲ್ಲಿ ನಡೆದಿದೆ.

ಜಯಶೀಲನ್ ಹಾಗೂ ಕುಟುಂಬ ಸದಸ್ಯರು ಮಾತೃಧರ್ಮಕ್ಕೆ ವಾಪಸ್ ಆಗಿದ್ದು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.

ಜಯಶೀಲನ್, ಪತ್ನಿ ಜಯಮ್ಮ, ಪ್ರಭಾಕರನ್, ಲಲಿತಾ ಪ್ರಭಾಕರನ್, ಪ್ರಕಾಶ್, ಶ್ವೇತಾ ಪ್ರಕಾಶ್ ಹಾಗೂ ಮಕ್ಕಳಾದ ಭರತ್ ಕುಮಾರ್, ಭಾವನಾ, ಪೃಥ್ವಿ ಸೇರಿದಂತೆ ಕುಟುಂಬದ 9 ಸದಸ್ಯರು ಮಾತೃಧರ್ಮಕ್ಕೆ ಮರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...