ಗುಜರಾತ್ನ ನವಸಾರಿಯಲ್ಲಿ ಬಸ್ ಮತ್ತು ಎಸ್ಯುವಿ ನಡುವೆ ಡಿಕ್ಕಿ ಸಂಭವಿಸಿ 9 ಸಾವು ಕಂಡಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಶನಿವಾರ ನಸುಕಿನ ವೇಳೆ ಗುಜರಾತ್ನ ನವಸಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡ 32 ಮಂದಿಯಲ್ಲಿ 17 ಮಂದಿಯನ್ನು ವಲ್ಸಾದ್ ನ ಆಸ್ಪತ್ರೆಗೆ, 14 ಮಂದಿಯನ್ನು ನವಸಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಗಾಯಾಳುವನ್ನು ಚಿಕಿತ್ಸೆಗಾಗಿ ಸೂರತ್ ಗೆ ಕರೆದೊಯ್ಯಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೇತನ್ ಜೋಶಿ ತಿಳಿಸಿದ್ದಾರೆ.
ಒಂಬತ್ತು ಮೃತದೇಹಗಳನ್ನು ಪೊಲೀಸ್ ತಂಡಗಳು ಹೊರತೆಗೆದು ಶವಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಎಸ್ಯುವಿ(ಫಾರ್ಚುನರ್) ಅಂಕಲೇಶ್ವರದ ಸಂಸ್ಥೆಯೊಂದರ ಉದ್ಯೋಗಿಗಳಾಗಿರುವ ಒಂಬತ್ತು ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಬಸ್ ಅಹಮದಾಬಾದ್ನಿಂದ ವಲ್ಸಾದ್ಗೆ ತೆರಳುತ್ತಿತ್ತು. ತಪ್ಪು ದಿಕ್ಕಿನಿಂದ ಬಂದ ಎಸ್.ಯು.ವಿ. ಬಸ್ ಗೆ ಡಿಕ್ಕಿ ಹೊಡೆಯುವ ಮೊದಲು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಎಸ್ಯುವಿ ಚಾಲಕ ನಿದ್ರೆಗೆ ಜಾರಿದ್ದಿರಬೇಕು ಎಂದು ತನಿಖಾಧಿಕಾರಿಗಳು ಊಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.