ಶಾರ್ಕ್ನ ಹಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಯ ತಲೆಯನ್ನ ಬರೋಬ್ಬರಿ 9 ಅಡಿ ಉದ್ದದ ಮೊಸಳೆಯು ಕಚ್ಚಿದ್ದು ಅದೃಷ್ಟವಶಾತ್ ಆತ ಮೊಸಳೆಯ ದಾಳಿಯಿಂದ ಪಾರಾಗಿದ್ದಾನೆ.
25 ವರ್ಷದ ಜೇಫ್ರಿ ಹೇಮ್ ಫ್ಲೋರಿಡಾದ ನದಿಯೊಂದರಲ್ಲಿ ಶಾರ್ಕ್ನ ಹಲ್ಲುಗಳ ಹುಡುಕಾಟದಲ್ಲಿದ್ದನು. ಈ ವೇಳೆಯಲ್ಲಿ ಬಂದ ಮೊಸಳೆ ಜೇಫ್ರಿ ತಲೆಯನ್ನ ಕಚ್ಚಿದೆ.
ಮೊಸಳೆಯ ಕಡಿತದಿಂದ ಜೇಫ್ರಿ ಎಷ್ಟೊಂದು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಎಂದರೆ ಆತನ ತಲೆಗೆ ಬರೋಬ್ಬರಿ 34 ಹೊಲಿಗೆ ಹಾಕಬೇಕಾಗಿ ಬಂದಿದೆ.
ಈ ಆಘಾತಕಾರಿ ಘಟನೆಯನ್ನ ಮೆಲುಕು ಹಾಕಿದೆ ಜೇಫ್ರಿ, ನಾನು ಪ್ರತಿ ಗಂಟೆಗೆ 50 ಮೈಲಿ ವೇಗದಲ್ಲಿ ಈಜುತ್ತಿದ್ದೆ. ಈ ವೇಳೆಯಲ್ಲಿ ಯಾರೋ ಎಳೆದಂತಾಯ್ತು. ನೀವು ಕ್ರೂರ ಪ್ರಾಣಿಯ ಬಾಯಿಗೆ ಸಿಗದ ಹೊರತು ಅದರ ಶಕ್ತಿ ಎಷ್ಟಿರುತ್ತೆ ಅನ್ನೋದನ್ನ ಅಂದಾಜು ಮಾಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ರು.
ಜೇಫ್ರಿ ತುಂಬಾ ಶಾಂತ ರೀತಿಯಲ್ಲಿ ವರ್ತಿಸಿದ್ದರಿಂದ ಮೊಸಳೆ ಆತನನ್ನ ಅಲ್ಲೇ ಬಿಟ್ಟು ತೆರಳಿದೆ. ಹೇಗೋ ದಡ ತಲುಪುವಲ್ಲಿ ಯಶಸ್ವಿಯಾದ ಜೇಫ್ರಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಬಹುಶಃ ತನ್ನ ಮೊಟ್ಟೆಗಳನ್ನ ಕಾಪಾಡಿಕೊಳ್ಳಲು ಮೊಸಳೆ ಆಕ್ರಮಣ ಮಾಡಿದ್ದಿರಬಹುದು ಎಂದು ಜೇಫ್ರಿ ಅಂದಾಜಿಸಿದ್ದಾನೆ.