ಹಿಮಾಚಲ ಪ್ರದೇಶದ 9.68 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಇದುವರೆಗೂ 1,537 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡೆ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ತಿಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ದುಡ್ಡು ಬಿಡುಗಡೆ ಮಾಡುವ ವೇಳೆ, ಪ್ರಧಾನಿ ನರೇಂದ್ರ ಮೋದಿ ಇದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದ ಠಾಕೂರ್ ಹೀಗೆ ಹೇಳಿದ್ದಾರೆ. ಇದೇ ವೇಳೆ, ದೇಶದ 10.9 ಕೋಟಿಯಷ್ಟು ರೈತ ಕುಟುಂಬಗಳಿಗೆ 20,946 ಕೋಟಿ ರೂಪಾಯಿಗಳನ್ನು ನಿಧಿಯಡಿ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ, 351 ರೈತೋತ್ಪನ್ನ ಸಂಘಗಳಿಗೆ (ಎಫ್‌ಪಿಓ) ಪ್ರಧಾನಿ 14.04 ಕೋಟಿ ರೂಪಾಯಿಗಳ ಈಕ್ವಿಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ.
ಫೆಬ್ರವರಿ 24, 2019ರಂದು ಚಾಲನೆ ನೀಡಲಾದ ಪಿಎಂ ಕಿಸಾನ್ ಯೋಜನೆಯಡಿ, ದೇಶದ ರೈತರಿಗೆ ವಾರ್ಷಿಕ 6,000 ರೂ.ಗಳ ನೆರವಿನ ಧನವನ್ನು ವಾರ್ಷಿಕ ಮೂರು ಕಂತುಗಳಲ್ಲಿ ತಲಾ 2,000 ರೂ.ಗಳಂತೆ ನೀಡಲಾಗುತ್ತದೆ.