alex Certify ʼಪಿಎಂ ಸ್ವನಿಧಿʼ ಯೋಜನೆಯಡಿ ಪಡೆದುಕೊಂಡ ಸಾಲದಲ್ಲಿ ಶೇ.88 ರಷ್ಟು ಬೀದಿ ವ್ಯಾಪಾರಿಗಳಿಂದ ಮರುಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಿಎಂ ಸ್ವನಿಧಿʼ ಯೋಜನೆಯಡಿ ಪಡೆದುಕೊಂಡ ಸಾಲದಲ್ಲಿ ಶೇ.88 ರಷ್ಟು ಬೀದಿ ವ್ಯಾಪಾರಿಗಳಿಂದ ಮರುಪಾವತಿ

ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ವಿತರಿಸಲಾದ ಸಾಲಗಳಲ್ಲಿ ಸುಮಾರು ಶೇ.12 ರಷ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರದಿಯಾಗಿದೆ. ಇದರಲ್ಲಿ ಶೇ.88 ರಷ್ಟು ಬೀದಿ ವ್ಯಾಪಾರಿಗಳು ಸಾಲಗಳನ್ನು ಮರುಪಾವತಿಸುತ್ತಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ ನೀಡಲು ಜುಲೈ 2, 2020 ರಂದು ಅನಾವರಣಗೊಂಡ ಮೈಕ್ರೋ ಕ್ರೆಡಿಟ್ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಕಂತಿನ ರೂ. 10,000 ಸಾಲವನ್ನು ನೀಡಿತು. ನಂತರ ರೂ. 20,000 ಎರಡನೇ ಹಂತವಾಗಿ ಮತ್ತು ರೂ. 50,000 ಮೂರನೇ ಕಂತಿನಂತೆ ನೀಡಲಾಯಿತು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಒದಗಿಸಿದ ರಾಜ್ಯವಾರು ಅಂಕಿ-ಅಂಶಗಳ ಪ್ರಕಾರ, 30,20,566 ಮೊದಲ ಸಾಲಗಳನ್ನು ಮತ್ತು 2,99,179 ಎರಡನೇ ಸಾಲಗಳನ್ನು ವಿತರಿಸಲಾಗಿದೆ. ಸಚಿವಾಲಯದ ಪ್ರಕಾರ, ಮೊದಲ ಸಾಲಗಳು ಒಂದು ವರ್ಷದ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ ಮತ್ತು ಇಎಂಐಗಳ ಮೂಲಕ ಪಾವತಿಸಲಾಗುತ್ತದೆ. ಸಾಲಗಳನ್ನು ಎರಡು ವರ್ಷಗಳ ಅವಧಿಯಲ್ಲಿ ವಿತರಿಸಲಾಗಿದೆ. ಮರುಪಾವತಿಯನ್ನು ಪೂರ್ಣಗೊಳಿಸಲು ವಿಭಿನ್ನ ದಿನಾಂಕಗಳನ್ನು ಹೊಂದಿರುತ್ತದೆ.

ವಿತರಿಸಲಾದ 30.24 ಲಕ್ಷಗಳಲ್ಲಿ ಕೇವಲ ಶೇ. 12 ರಷ್ಟು ಸಾಲಗಳು ಅನುತ್ಪಾದಕ ಆಸ್ತಿಗಳಾಗಿ ವರದಿಯಾಗಿವೆ. ಅಂದರೆ ಶೇ. 88 ರಷ್ಟು ಬೀದಿ ವ್ಯಾಪಾರಿಗಳು ನಿಯಮಿತವಾಗಿ ಸಾಲವನ್ನು ಮರುಪಾವತಿಸುತ್ತಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...