ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಸಂಪುಟದಲ್ಲಿ ಹೊಸ ಮುಖಗಳಿಗೂ ಅವಕಾಶ ಸಿಕ್ಕಿದೆ. ಇದೇ ವೇಳೆ ಸಂಪುಟದಲ್ಲಿರುವ ಶೇ.87ರಷ್ಟು ಮಂತ್ರಿಗಳು ಕೋಟ್ಯಾಧಿಪತಿಗಳು. ಅಷ್ಟೇ ಅಲ್ಲದೇ ಶೇ.49 ಮಂತ್ರಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
ಶೇ.44 ಪ್ರತಿಶತದಷ್ಟು ಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ. ಉತ್ತರ ಪ್ರದೇಶ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವಿಶ್ಲೇಷಣೆಯ ಪ್ರಕಾರ 45 ಮಂತ್ರಿಗಳ ಪೈಕಿ ಕೇವಲ ಐದು (ಶೇ.11) ಮಹಿಳೆಯರು ಇದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದವರ ಅಫಿಡವಿಟ್‌ಗಳನ್ನು ಎರಡು ಸಂಸ್ಥೆಗಳು ವಿಶ್ಲೇಷಿಸಿವೆ. 22 ಸಚಿವರು (ಶೇ.49) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದನ್ನು ಘೋಷಿಸಿಕೊಂಡಿದ್ದಾರೆ ಮತ್ತು 20 ಸಚಿವರು (ಶೇ.44) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆ ಇರುವುದನ್ನು ದಾಖಲಿಸಿದ್ದಾರೆ.
BIG NEWS: ಸಿದ್ದರಾಮಯ್ಯನವರ ಸ್ಥಿತಿ ‘ತುಘಲಕ್’ ಪರಿಸ್ಥಿತಿಯಾಗಿದೆ; ವ್ಯಂಗ್ಯವಾಡಿದ ಸಚಿವ ಶ್ರೀರಾಮುಲು
45 ಮಂತ್ರಿಗಳಲ್ಲಿ 39 (ಶೇ.87) ಕೋಟ್ಯಾಧಿಪತಿಗಳಾಗಿದ್ದು, ಸರಾಸರಿ 9 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 58.07 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ತಿಲೋಯ್ ಕ್ಷೇತ್ರದ ಮಾಯಾಂಕೇಶ್ವರ್ ಶರಣ್ ಸಿಂಗ್ ಅತಿ ಹೆಚ್ಚು ಆಸ್ತಿ ಹೊಂದಿರುವ ಸಚಿವರು ಮತ್ತು ಕಡಿಮೆ ಘೋಷಿತ ಆಸ್ತಿ ಹೊಂದಿರುವವರು ವಿಧಾನ ಪರಿಷತ್ತಿನ ಸದಸ್ಯ ಧರಂವೀರ್ ಸಿಂಗ್. ಅವರ ಬಳಿ 42.91 ಲಕ್ಷ ಮೌಲ್ಯದ ಆಸ್ತಿ ಇದೆ.
ಒಂಬತ್ತು (20 ಪ್ರತಿಶತ) ಸಚಿವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು 8 ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ ಮತ್ತು 36 (80 ಪ್ರತಿಶತ) ಸಚಿವರು ಪದವೀಧರ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ.