alex Certify ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದ ‘83’ ಸಿನಿಮಾ ಟ್ರೇಲರ್​; ರಣವೀರ್​, ದೀಪಿಕಾ ನಟನೆಗೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದ ‘83’ ಸಿನಿಮಾ ಟ್ರೇಲರ್​; ರಣವೀರ್​, ದೀಪಿಕಾ ನಟನೆಗೆ ಅಭಿಮಾನಿಗಳು ಫಿದಾ

1983ರ ಜೂನ್​ 25ರಂದು ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್​ ದೇವ್​ ಬರೋಬ್ಬರಿ 38 ವರ್ಷಗಳ ಬಳಿಕ ದೇಶಕ್ಕೆ ವರ್ಲ್ಡ್​ ಕಪ್​ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಕಪಿಲ್​ ದೇವ್​ ಜೀವನ ಆಧಾರಿತ ಸಿನಿಮಾ 83ಯಲ್ಲಿ ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿರೋದು ಎಲ್ಲರಿಗೂ ತಿಳಿಯುವ ವಿಷಯವೇ. ಇಂದು ಮುಂಜಾನೆ 83 ಸಿನಿಮಾ ತಂಡ ಚಿತ್ರ ಟ್ರೇಲರ್​ನ್ನು ಬಿಡುಗಡೆ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ಟ್ರೇಲರ್​​ ಧೂಳೆಬ್ಬಿಸುತ್ತಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್​ ಗೆದ್ದ ಕ್ಷಣವನ್ನೇ ಎಳೆ ಎಳೆಯಾಗಿ ಬಿಚ್ಚಿಡಲಿರುವ ಈ ಸಿನಿಮಾದಲ್ಲಿ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ.

ಟ್ರೇಲರ್​ನಲ್ಲಿ ಇಂಗ್ಲೆಂಡ್​ನಲ್ಲಿ ವೆಸ್ಟ್​ ಇಂಡೀಸ್​ ಆಟಗಾರರಿಗೆ ಹೋಲಿಕೆ ಮಾಡಿದರೆ ಭಾರತೀಯ ತಂಡವನ್ನು ಎಷ್ಟು ಕಳಪೆಯಾಗಿ ಕಾಣಲಾಗಿತ್ತು ಎಂಬುದನ್ನು ತೋರಿಸಲಾಗಿದೆ. ಟೀಂ ಇಂಡಿಯಾ ಆಟಗಾರರ ಕಠಿಣ ಅಭ್ಯಾಸ, ಮೋಜಿನ ಕ್ಷಣಗಳನ್ನೂ ಈ ಟ್ರೇಲರ್ ಹೊಂದಿದೆ.

ರಣವೀರ್​ ಸಿಂಗ್​ ಪತ್ನಿ ಹಾಗೂ ನಟಿ ದೀಪಿಕಾ ಪಡುಕೋಣೆ, ಈ ಸಿನಿಮಾದಲ್ಲಿ ಕಪಿಲ್​ ದೇವ್​ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ದೀಪಿಕಾ ಪಡುಕೋಣೆಯ ಲುಕ್​ ಇಡೀ ಸಿನಿಮಾದ ಹೈಲೈಟ್ಸ್​ ಪಾಯಿಂಟ್​ಗಳಲ್ಲಿ ಒಂದಾಗಿದೆ. ವರ್ಲ್ಡ್​ ಕಪ್​ ಪಂದ್ಯವನ್ನು ಗೆಲ್ಲುವ ಮುನ್ನ ಟೀಂ ಇಂಡಿಯಾ ಅನುಭವಿಸಿದ ಅವಮಾನ ಹಾಗೂ ವಿಶ್ವಕಪ್​ ಗೆಲ್ಲಲು ಟೀಂ ಇಂಡಿಯಾ ಪಟ್ಟ ಶ್ರಮದ ಝಲಕ್​ನ್ನು ತೋರಿಸುತ್ತಿರುವ ಈ ಟ್ರೇಲರ್​ ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಆಫ್​ ದಿ ಟೌನ್​ ಆಗಿದೆ.

83 ಸಿನಿಮಾ ಡಿಸೆಂಬರ್​ 24ರಂದು ಹಿಂದಿ, ತಮಿಳು, ತೆಲಗು, ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆಕಾಣಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...