
1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತನ್ನ ಮೊದಲ ವಿಶ್ವಕಪ್ ಜಯಿಸಿದ ಸಂದರ್ಭದ ಸುತ್ತ ಚಿತ್ರಕಥೆ ಹೆಣೆಯಲಾಗಿದೆ ಎಂದು ಚಿತ್ರದ ಹೆಸರೇ ಸೂಚಿಸುತ್ತಿದೆ. ರಣವೀರ್ ಕಪೂರ್ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ಟ್ರೇಲರ್ ಬಹಳ ವೈರಲ್ ಆಗಿದೆ. ಟ್ರೇಲರ್‌ನಲ್ಲಿ ಪುಟ್ಟ ಬಾಲಕನೊಬ್ಬ ವಿಶ್ವಕಪ್ ಜಯಿಸಿದ್ದನ್ನು ಸಂಭ್ರಮಿಸುವ ದೃಶ್ಯವೊಂದಿದ್ದು, ಅದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ರನ್ನೇ ಹೋಲುವ ತೋರಲಾಗಿದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ. ಈ ವದಂತಿಗಳಿಗೆ ಚಿತ್ರ ತಂಡದ ಸದಸ್ಯರೊಬ್ಬರು ಖುದ್ದು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದ ಟ್ರೇಲರ್‌ನ ಫ್ರೇಮ್ ಒಂದನ್ನು ಶೇರ್ ಮಾಡಿಕೊಂಡಿರುವ ಉದಯ್ ಭಾಟಿಯಾ ಹೆಸರಿನ ಚಿತ್ರ ವಿಮರ್ಶಕ, ಚಿತ್ರದಲ್ಲಿರುವುದು ಸಚಿನ್ ಅವರಾ ಎಂದು ಪ್ರಶ್ನೆ ಬಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರದ ಸಂಕಲಕಕಾರ ನಿತಿನ್ ಬೇಯ್ದ್, ಟ್ರೇಲರ್‌ನಲ್ಲಿ ಸಚಿನ್ ತೆಂಡೂಲ್ಕರ್ ಬಾಲಕರಿದ್ದಂತೆ ತೋರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.