ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, ಇಲ್ಲೊಬ್ಬರು ತಮ್ಮ ಯೌವನದಲ್ಲಿ ಹೊಸ ಕಾರು ಖರೀದಿ ಮಾಡಬೇಕೆಂಬ ಕಂಡಿದ್ದ ಕನಸು ನನಸಾಗದಿದ್ದರೂ, ಇದೀಗ 83ರ ಇಳಿ ಪ್ರಾಯದಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಓಡಿಸಿದ್ದು, ಇನ್ನೂ ತಡವಾಗಿಲ್ಲ ಎಂದು ಸಾಬೀತುಪಡಿಸಿದ್ದಾರೆ.
ಜನಪ್ರಿಯ ಫೋಟೋಬ್ಲಾಗ್ ಹ್ಯೂಮನ್ಸ್ ಆಫ್ ಬಾಂಬೆ ಈ ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು ಚಾಲನೆಯನ್ನು ಇಷ್ಟಪಡುವ ಮುಂಬೈನ 83 ವರ್ಷದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಪೋಸ್ಟ್‌ನಲ್ಲಿ ಹೆಸರು ಬಹಿರಂಗಪಡಿಸದ ವ್ಯಕ್ತಿ, ಕಾರುಗಳ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರಂತೆ. ಆದರೆ, ಹೆಂಡತಿ, ಮಕ್ಕಳ ಲಾಲನೆ-ಪಾಲನೆ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾತ್ರ ಖರೀದಿಸಿದ್ದರು.
ತಂಡಕ್ಕೆ ಮರಳಿದ ರಾಹುಲ್, ಸರಣಿ ಜಯಿಸುವ ತವಕದಲ್ಲಿ ಟೀಂ ಇಂಡಿಯಾ
ಆರು ತಿಂಗಳ ಹಿಂದೆ ಅವರು ಮತ್ತೊಂದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಯೋಚಿಸಿದ್ದಾರೆ. ಇದೀಗ ಬೆಳೆದು ದೊಡ್ಡವರಾಗಿ ತಮ್ಮ ಕಾಲ ಮೇಲೆ ನಿಂತಿರುವ ಮಕ್ಕಳು ತಂದೆಗೆ ಹೊಚ್ಚ ಹೊಸ ಕಾರನ್ನು ಕೊಡಿಸಿದ್ದಾರೆ. ಮೊಮ್ಮಗನ 25ನೇ ವರ್ಷದ ಹುಟ್ಟುಹಬ್ಬದಂದು ತಮ್ಮ ತಂದೆಗೆ ಸರ್ಫ್ರೈಸ್ ಉಡುಗೊರೆಯನ್ನು ಮಕ್ಕಳು ನೀಡಿದ್ದು ವಿಶೇಷವಾಗಿದೆ. ನಂತರ 83ರ ಹರೆಯದ ವೃದ್ಧ ತಮ್ಮ ಕುಟುಂಬವನ್ನು ಕಾರಿನಲ್ಲಿ ಕೂರಿಸಿ ತಾವೇ ಸ್ವತಃ ಚಾಲನೆ ಮಾಡಿದ್ದಾರೆ. ಇದು ತನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
https://www.youtube.com/watch?v=qs0oZyc1hgA