alex Certify ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ ನೃತ್ಯಗಳ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಅಂಥದ್ದೆ ಒಂದು ವಿಡಿಯೋ ವೈರಲ್​ ಆಗಿದೆ.

ಮದುವೆ ಸಮಾರಂಭ ಒಂದರಲ್ಲಿ 82 ವರ್ಷದ ವ್ಯಕ್ತಿಯೊಬ್ಬರು “ಅಭಿ ತೋ ಪಾರ್ಟಿ ಶುರು ಹುಯಿ ಹೈ” ಹಾಡಿಗೆ ನರ್ತಿಸುವ ವಿಡಿಯೋ ಇದಾಗಿದೆ. ಸೂಟು ಧರಿಸಿದ ವೃದ್ಧನ ಈ ನೃತ್ಯದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

82 ವರ್ಷದ ವೃದ್ಧ ಡಾನ್ಸ್​ ಮಾಡುವಾಗ ಸುತ್ತಮುತ್ತಲಿನವರು ಹುರಿದುಂಬಿಸುವುದನ್ನು ನೋಡಬಹುದು. ಸೋನಮ್ ಕಪೂರ್ ಮತ್ತು ಫವಾದ್ ಖಾನ್ ಅವರ ಚಲನಚಿತ್ರ ಖೂಬ್‌ಸೂರತ್‌ನ ಶುರು ಹುಯಿ ಹೈ ಹಾಡಿಗೆ ಅವರು ಕಾಲು ಅಲ್ಲಾಡಿಸುವುದನ್ನು ಕಾಣಬಹುದು. ಈ ಕಿರು ವಿಡಿಯೋ ಇದಾಗಲೇ 5.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ವೃದ್ಧನ ಉತ್ಸಾಹಕ್ಕೆ ಜನರು ಮನಸೋತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...