alex Certify SHOCKING NEWS:​ ಕಳೆದ 5 ವರ್ಷಗಳಲ್ಲಿ ಸಶಸ್ತ್ರ ಪಡೆಗಳಲ್ಲಿ 819 ಆತ್ಮಹತ್ಯೆ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS:​ ಕಳೆದ 5 ವರ್ಷಗಳಲ್ಲಿ ಸಶಸ್ತ್ರ ಪಡೆಗಳಲ್ಲಿ 819 ಆತ್ಮಹತ್ಯೆ ಘಟನೆ

ಇತ್ತೀಚೆಗೆ ಸೈನಿಕರು ಗುಂಡುಹಾರಿಸಿ, ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಕಳೆದ ಐದು ವರ್ಷಗಳಲ್ಲಿ ಸಶಸ್ತ್ರ ಪಡೆಗಳ ಒಟ್ಟು 819 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಸರ್ಕಾರವು ಒದಗಿಸಿದ ವಿವರಗಳ ಪ್ರಕಾರ ಸೇನೆಯು ಅಂತಹ ಗರಿಷ್ಠ 642 ಪ್ರಕರಣಗಳನ್ನು ವರದಿ ಮಾಡಿದೆ.

ಕಳೆದ ಐದು ವರ್ಷಗಳಲ್ಲಿ ಎಷ್ಟು ಸೈನಿಕರು ಮತ್ತು ಮಾಜಿ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಸಚಿವರು ಸೋಮವಾರ ಉತ್ತರಿಸಿದರು.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್​ ಭಟ್​ ಅವರು ಈ ಅವಧಿಯಲ್ಲಿ ಭಾರತೀಯ ವಾಯುಪಡೆಯು 148 ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಭಾರತೀಯ ನೌಕಾಪಡೆಯಲ್ಲಿ 29 ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದ್ದಾರೆ.

ಸೇವೆಗಳಲ್ಲಿ ಒತ್ತಡ ಮತ್ತು ಆತ್ಮಹತ್ಯೆಗಳು ನಡೆಯದಂತೆ ಸೈನಿಕರ ಒತ್ತಡ ತಗ್ಗಿಸುವ ಕಾರ್ಯವಿಧಾನಗಳನ್ನು ಸುಧಾರಿಸುವ ಕ್ರಮಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿವೆ. ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ರೂಪಿಸಲಾಗಿದೆ ಮತ್ತು 2009 ರಿಂದ ಚಾಲ್ತಿಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.

ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯಂತಹ ಸಮಸ್ಯೆಗಳಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಗುರುತಿಸಲು ವಿವಿಧ ಕಾರ್ಯವಿಧಾನಗಳು ಜಾರಿಯಲ್ಲಿವೆ. ಒತ್ತಡ ಸಂಬಂಧ ಹೆಚ್ಚಿನ ಅಪಾಯದಲ್ಲಿರುವ ಸಿಬ್ಬಂದಿಯನ್ನು ಘಟಕದ ಕಮಾಂಡಿಂಗ್​ ಅಧಿಕಾರಿಗಳು, ರೆಜಿಮೆಂಟಲ್​ ವೈದ್ಯಕಿಯ ಅಧಿಕಾರಿಗಳು ನಿಗದಿಪಡಿಸಿದ ಕಾರ್ಯವಿಧಾನಗಳ ಪ್ರಕಾರ ಗುರುತಿಸುತ್ತಾರೆ ಮತ್ತು ಸಲಹೆ ನೀಡುತ್ತಾರೆ. ರಜೆಯ ನಂತರ ಘಟಕಗಳಿಗೆ ಹಿಂತಿರುಗುವ ಎಲ್ಲಾ ಸಿಬ್ಬಂದಿಯನ್ನು ರೆಜಿಮೆಂಟಲ್​ ವೈದ್ಯಕೀಯ ಅಧಿಕಾರಿಗಳು ಸಂದರ್ಶನ, ಸಲಹೆ ಮತ್ತು ವೈದ್ಯಕಿಯ ಪರೀಕ್ಷೆಗೆ ಒಳಪಡಿಸುತ್ತಾರೆ. ಮನೋವೈದ್ಯರು ಅವಧಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...