ಸಿರಿವಂತರೇ ದಾನ ನೀಡಲು ಆಲೋಚಿಸುವ ಇಂದಿನ ಯುಗದಲ್ಲಿ, ವೃದ್ದೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೂಡು ನಿವಾಸಿ 80 ವರ್ಷದ ಅಶ್ವತಮ್ಮ ಎಂಬ ಮಹಿಳೆ ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನ್ನದಾನಕ್ಕೆ ನೀಡಿದ್ದಾರೆ.
ವರ್ಷದ ಬಹುತೇಕ ಸಮಯ ಮಾಲಾಧಾರಿಯಾಗಿದ್ದುಕೊಂಡು ಅಯ್ಯಪ್ಪನ ಸೇವೆ ಮಾಡುತ್ತಿರುವ ಇವರು, ಭಿಕ್ಷೆ ಬೇಡಿದ ಹಣವನ್ನು ರಾಜರಾಜೇಶ್ವರಿ ದೇವಸ್ಥಾನಕ್ಕೆ ಅನ್ನದಾನಕ್ಕಾಗಿ ನೀಡುವ ಮೂಲಕ ತಮ್ಮ ಇಳಿವಯಸ್ಸಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.