ಮುಂಬೈ: ಇನ್ನು ಕೇವಲ 29 ವರ್ಷಗಳಲ್ಲಿ ದಕ್ಷಿಣ ಮುಂಬೈ ಸಮುದ್ರ ಪಾಲಾಗಲಿದೆ. ಸಮುದ್ರದ ಮಟ್ಟ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ 2050ರ ವೇಳೆಗೆ ಮುಂಬೈನ ನಾರಿಮನ್ ಪಾಯಿಂಟ್ ಹಾಗೂ ಸಚಿವಾಲಯದ ಕಟ್ಟಡಗಳು ಮುಳುಗಡೆಯಾಗಲಿವೆ ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.
ಮುಂಬೈ ಪರಿಸರ ಕಾರ್ಯಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ ಅಪಾಯದಿಂದ ಮುಂಬೈ ನಗರದ ದಕ್ಷಿಣಭಾಗ ಶೇಕಡ 80ರಷ್ಟು ಸಮುದ್ರದ ಪಾಲಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಕೃತಿಯೇ ಅನೇಕ ಸಲ ಎಚ್ಚರಿಕೆ ಸಂದೇಶ ನೀಡಿದ್ದರೂ, ಕೂಡ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ತಲೆಮಾರಿನ ಬಗ್ಗೆ ಚಿಂತೆಬಿಡಿ, ಈಗಿನ ತಲೆಮಾರಿಗೆ ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುವುದನ್ನು ಕಾಣಬಹುದು ಎಂದು ಎಚ್ಚರಿಕೆ ಮಾತುಗಳನ್ನಾಡಿದ್ದಾರೆ.