alex Certify 80 ಇಳಿ ವಯಸ್ಸಿನಲ್ಲೂ ಬತ್ತದ ರಾಷ್ಟ್ರ ಪ್ರೇಮ; ಸೇನೆ ಸೇರಲು ಮುಂದಾದ ಉಕ್ರೇನ್ ವೃದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

80 ಇಳಿ ವಯಸ್ಸಿನಲ್ಲೂ ಬತ್ತದ ರಾಷ್ಟ್ರ ಪ್ರೇಮ; ಸೇನೆ ಸೇರಲು ಮುಂದಾದ ಉಕ್ರೇನ್ ವೃದ್ಧ

ಉಕ್ರೇನ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಮಾಯಕ ನಾಗರಿಕರು, ಯೋಧರನ್ನು ಬಲಿ ಪಡೆಯುತ್ತಿದೆ. ಈ ಮಧ್ಯೆ ಉಕ್ರೇನ್‌ ನ ಹಿರಿಜೀವವೊಂದು ರಾಷ್ಟ್ರರಕ್ಷಣೆಗಾಗಿ ಸೇನೆ ಸೇರಲು ಹೊರಟಿರುವ ದೃಶ್ಯ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದೆ.

80 ವರ್ಷದ ವೃದ್ಧನ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆತ ಕೈಯಲ್ಲಿ ಬ್ಯಾಗ್‌ ಒಂದನ್ನು ಹಿಡಿದುಕೊಂಡು ಸೇನೆ ಸೇರಲು ಸರತಿ ಸಾಲಲ್ಲಿ ನಿಂತಿದ್ದಾನೆ. ಆತನ ಬ್ಯಾಗ್‌ ನಲ್ಲಿ ಏನೇನಿದೆ ಅನ್ನೋದನ್ನು ಕೇಳಿದ್ರೆ ಎಂಥಾ ಕಲ್ಲು ಮನಸ್ಸಿನವರಾದ್ರೂ ಭಾವುಕರಾಗೋದ್ರಲ್ಲಿ ಸಂಶಯವೇ ಇಲ್ಲ.

ಬ್ಯಾಗ್‌ ನಲ್ಲಿ ಎರಡು ಶರ್ಟ್‌, 2 ಪ್ಯಾಂಟ್‌, ಸ್ಯಾಂಡ್ವಿಚ್‌ ಗಳು ಹಾಗೂ ಟೂತ್‌ ಬ್ರಷ್‌ ಅನ್ನು ಮಾತ್ರ ಆತ ತೆಗೆದುಕೊಂಡು ಬಂದಿದ್ದಾನೆ. ತನ್ನ ಮೊಮ್ಮಕ್ಕಳ ರಕ್ಷಣೆಗಾಗಿ ಸೇನೆ ಸೇರಲು ಹೊರಟಿರುವುದಾಗಿ ತಿಳಿಸಿದ್ದಾನೆ. ಆತನಿಗಿರುವ ರಾಷ್ಟ್ರಪ್ರೇಮವನ್ನು ಎಲ್ಲರೂ ಕೊಂಡಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...