ತೆಲಂಗಾಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದೊಳಗೆ ಎಂಟು ಕಾರ್ಮಿಕರು ಸಿಕ್ಕಿಬಿದ್ದಿದ್ದು, ಇನ್ನೂ ಕಾರ್ಮಿಕರ ಸುಳಿವು ಸಿಕ್ಕಿಲ್ಲ.
ನಾಗರ್ ಕರ್ನೂಲ್ ಜಿಲ್ಲೆಯ ದೊಮಲಪೆಂಟಾ ಬಳಿಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ ಎಲ್ ಬಿಸಿ) ಸುರಂಗದ ಒಂದು ಭಾಗ ಶನಿವಾರ ಬೆಳಿಗ್ಗೆ 8: 30 ರ ಸುಮಾರಿಗೆ ಕುಸಿದ ನಂತರ ಈ ಘಟನೆ ಸಂಭವಿಸಿದೆ. ದಟ್ಟವಾದ ಮಣ್ಣು ಮತ್ತು ನೀರಿನಿಂದಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಲು ಕಷ್ಟವಾಗಿದೆ ಎಂದು ವರದಿ ಮಾಡಿವೆ.
ಎಸ್ಎಲ್ಬಿಸಿ ಸುರಂಗದ ಇತ್ತೀಚಿನ ದೃಶ್ಯಗಳು ಹೊರಬಂದಿವೆ. ಈ ಫೋಟೋಗಳು, ವಿಡಿಯೋ ವೈರಲ್ ಆಗುತ್ತಿವೆ. ಎಸ್ಎಲ್ಬಿಸಿ ಸುರಂಗದ ಇತ್ತೀಚಿನ ದೃಶ್ಯಗಳು ಹೊರಬರುವುದರೊಂದಿಗೆ…ಈ ದೃಶ್ಯಗಳನ್ನು ನೋಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಎಸ್ಎಲ್ಬಿಸಿ ಸುರಂಗದಲ್ಲಿ ಮಣ್ಣು ಕುಸಿದ ಕಾರಣ 8 ಕಾರ್ಮಿಕರು ಈ ಪ್ರದೇಶದೊಳಗೆ ಸಿಕ್ಕಿಬಿದ್ದಿದ್ದಾರೆ.
Telugu Scribe Exclusive Visuals
SLBC టన్నెల్ లేటెస్ట్ విజువల్స్
లోపల మట్టి కూలిపోయి 8 మంది కార్మికులు చిక్కుకున్న ప్రాంతం pic.twitter.com/RlPXAB33Bw
— Telugu Scribe (@TeluguScribe) February 26, 2025