ಬೆಂಗಳೂರು: 8000 ಕೋಟಿ ರೂಪಾಯಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಅಸ್ತು ಎಂದಿದೆ. ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆ ಟೆಂಡರ್ ಗೆ ಹೈಕೋರ್ಟ್ ಅಸ್ತು ಎಂದು ಹೇಳಿದ್ದು, ಎಲ್ ಅಂಡ್ ಟಿ ಸಂಸ್ಥೆಯ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪಾರದರ್ಶಕ ಕಾಯ್ದೆ ವಿರುದ್ಧವಾಗಿ ಕೇವಲ 21 ದಿನಗಳ ಟೆಂಡರ್ ಕರೆಯಲಾಗಿದೆ. ಕೆಪಿಸಿಎಲ್ ನಿಂದ ಕೆಲವು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ಕರೆಯಲಾಗಿದೆ ಎಂದು ಟೆಂಡರ್ ಪ್ರಶ್ನಿಸಿ ಎಲ್ ಅಂಡ್ ಟಿ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿ ಆದೇಶ ನೀಡಿದೆ.