ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆರಂಭದ ಮೂರು ತಿಂಗಳ ಜೊತೆಗೆ ಕೊನೆಯ ಎರಡು ತಿಂಗಳು ಗರ್ಭಿಣಿಯಾದವಳು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆ ಸಮಯದಲ್ಲಿ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಏಳು ತಿಂಗಳಿನಿಂದಲೇ ಅತಿಯಾದ ಮಾತ್ರೆ ಸೇವನೆ ಅಭ್ಯಾಸವನ್ನು ನಿಲ್ಲಿಸಿ. ಗರ್ಭಿಣಿ ಅತಿಯಾಗಿ ಮಾತ್ರೆ ಸೇವನೆ ಮಾಡುವುದು ಮಗುವಿನ ಕರುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹೆರಿಗೆ ವೇಳೆ ಅಥವಾ ಹೆರಿಗೆ ನಂತ್ರ ಮಗುವಿನ ಮೇಲೆ ಇದು ಪ್ರಭಾವ ಬೀರುತ್ತದೆ.
ಎಂಟನೇ ತಿಂಗಳಿನಲ್ಲಿ ಹೆಚ್ಚು ಭಾರದ ವಸ್ತುಗಳನ್ನು ಎತ್ತುವ ಸಾಹಸಕ್ಕೆ ಹೋಗಬೇಡಿ. ಹೊಟ್ಟೆಯ ಮೇಲೆ ಭಾರ ಬೀಳುವ ಕೆಲಸವನ್ನು ಮಾಡಬೇಡಿ. ಹಾಗೆ ತುಂಬಾ ಸಮಯ ನಿಂತುಕೊಂಡು ಕೆಲಸ ಮಾಡಬೇಡಿ. ಇದು ನಿಮ್ಮ ಹೆರಿಗೆ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಕೆಲ ಗರ್ಭಿಣಿಯರಿಗೆ ಮೂತ್ರದಲ್ಲಿ ರಕ್ತ ಬರುತ್ತದೆ. ಇದು ಸಾಮಾನ್ಯ ಸಂಗತಿ ಎಂದು ಬಹುತೇಕರು ನಿರ್ಲಕ್ಷ್ಯ ಮಾಡ್ತಾರೆ. ಇದು ಹೆರಿಗೆ ವೇಳೆ ಅಸಹನೀಯ ನೋವಿಗೆ ಕಾರಣವಾಗುತ್ತದೆ.
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಹೋದಲ್ಲಿ ದಣಿವು ಕಾಣಿಸಿಕೊಂಡು ಆರೋಗ್ಯ ಹಾಳಾಗುತ್ತದೆ.
ಈ ಸಮಯದಲ್ಲಿ ಮಹಿಳೆಯರು ಸದಾ ಖುಷಿ-ಖುಷಿಯಾಗಿ ಸಕಾರಾತ್ಮಕ ಯೋಚನೆಗಳನ್ನು ಮಾಡುತ್ತ ಕಾಲ ಕಳೆಯಬೇಕು. ಯಾವುದೇ ಆತಂಕ ಹಾಗೂ ಒತ್ತಡಕ್ಕೆ ಒಳಗಾಗಬಾರದು.