alex Certify BIG NEWS: 8 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು: ಪ್ರಿಯಕರನಿಂದಲೇ ಹತ್ಯೆಯಾದಳಾ ಪ್ರಿಯತಮೆ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 8 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು: ಪ್ರಿಯಕರನಿಂದಲೇ ಹತ್ಯೆಯಾದಳಾ ಪ್ರಿಯತಮೆ?

ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅನುಷಾ (28) ಮೃತ ದುರ್ದೈವಿ. ಅನುಷಾ 8 ವರ್ಷಗಳ ಹಿಂದೆ ಹೊಸಕೋಟೆ ಮೂಲದ ವ್ಯಕಿಯೊಬ್ಬರನ್ನು ವಿವಾಹವಾಗಿ ಓರ್ವ ಹೆಣ್ಣು ಮಗಳು ಕೂಡ ಇದ್ದಳು. ಆದರೆ ಪತಿಗೆ ಪ್ಯಾರಾಲಿಸ್ ಆದ ಬಳಿಕ ಪತಿಯನ್ನು ತೊರೆದ ಅನುಷಾ ತವರು ಮನೆಗೆ ಹಿಂತಿರುಗಿದ್ದಳು. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅನುಷಾಳಿಗೆ ಗುಂತಪನಹಳ್ಳಿ ಗ್ರಾಮದ ಪವನ್ ಪರಿಚಯವಾಗಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಆತನೊಂದಿಗೆ ಇದ್ದ ಅನುಷಾ ಗರ್ಭಿಣಿಯಾಗಿದ್ದಳು.

ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗುವಂತೆ ಅನುಷಾ ಒತ್ತಾಯಿಸಿದ್ದಳು. ವಿಷಯವನ್ನು ಪವನ್ ಮನೆಯವರಿಗೂ ತಿಳಿಸಿದ್ದಳು. ಬೇರೆ ಬೇರೆ ಜಾತಿ, ಅಲ್ಲದೇ ಎರಡನೇ ಮದುವೆ ಎಂದು ಪವನ್ ಮನೆಯವರು ನಿರಾಕರಿಸಿದ್ದರು. ಇಬ್ಬರನ್ನೂ ಮನೆಗೆ ಸೇರಿಸಿರಲಿಲ್ಲ. ಇದರಿಂದ 15 ದಿನಗಳ ಹಿಂದೆ ಪವನ್ ಊಟದ ಜೊತೆ ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಅನುಷಾ ಆರೋಪಿಸಿದ್ದಳು. ಪವನ್ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಳು. ಆಸ್ಪತ್ರೆಗೆ ದಾಖಲಾಗಿದ್ದ ಅನುಷಾ ಡಿಸ್ಚಾರ್ಜ್ ಆಗಿ ಬಂದು ಮತ್ತೆ ಪವನ್ ಜೊತೆಯಲ್ಲಿಯೇ ಇದ್ದಳು. ರಾತ್ರಿ ಹೊಂಗೆ ಮರದ ಕೆಳಗೆ ಇಬ್ಬರು ಮಲಗಿದ್ದರಂತೆ. ಈಗ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪವನ್ ಪೊಲೀಸರಿಗೆ ದೂರು ನೀಡಿದ್ದಾನೆ.

8 ತಿಂಗಳ ಗರ್ಭಿಣಿ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪ್ರಿಯಕರ ಪವನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...