ಅದೆಷ್ಟೋ ಜನರು ಮೊಬೈಲ್‌ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಈಗ ಮೊಬೈಲ್ ಬೇಕೇ ಬೇಕು. ಸೋಶಿಯಲ್ ಮೀಡಿಯಾ ಹುಚ್ಚನ್ನು ಅನೇಕರು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಹಲವರು ಜೀವನದ ವಾಸ್ತವದಿಂದ ದೂರ ಸರಿಯುತ್ತಿದ್ದಾರೆ. ಒಂದು ತಿಂಗಳು ಮೊಬೈಲ್‌ನಿಂದ ಸಂಪೂರ್ಣ ದೂರವಿದ್ದರೆ ಹೇಗಿರಬಹುದು ಹೇಳಿ ?
ಸಿಗ್ಗಿ ಎಂಬ ಕಂಪನಿಯೊಂದು ಫೋನ್ ತ್ಯಜಿಸಿದರೆ 10,000 ಡಾಲರ್ ಹಣ ಕೊಡುವುದಾಗಿ ಆಫರ್ ಇಟ್ಟಿದೆ. ಇದು “ಡ್ರೈ ಜನವರಿ” ಎಂಬ ಟ್ರೆಂಡ್‌ನಂತೆ. ಇದನ್ನು “ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ” ಎಂದೂ ಕರೆಯಬಹುದು. ಆಯ್ಕೆಯಾದ 10 ಮಂದಿಗೆ ವಿಶೇಷ ಬಾಕ್ಸ್ ನೀಡಲಾಗುತ್ತಿದ್ದು, ಅದರಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಇಡಲಾಗುತ್ತದೆ. ಫೋನ್ ಇಲ್ಲದೆಯೇ ಅವರು ಲೈಫ್ ಎಂಜಾಯ್ ಮಾಡಬಹುದು.
ಈ ರೀತಿ ಒಂದು ತಿಂಗಳು ಮೊಬೈಲ್ ಬಳಸದೇ ಇದ್ದರೆ 8 ಲಕ್ಷ ರೂಪಾಯಿ ಗಳಿಸಬಹುದು. ಇದರ ಜೊತೆಗೆ ಹಳೆಯ ಶೈಲಿಯ ಫ್ಲಿಪ್ ಫೋನ್ ಕೂಡ ಸಿಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಇದನ್ನು ಬಳಸಬಹುದು. 10 ಸಾವಿರ ಡಾಲರ್ ಹಣದ ಜೊತೆಗೆ ಮೂರು ತಿಂಗಳವರೆಗೆ ಸಿಗ್ಗಿ ಕಂಪನಿಯ ಮೊಸರನ್ನು ಉಚಿತವಾಗಿ ಪಡೆಯಬಹುದು.
ಇದೊಂದು ರೀತಿಯ ಫನ್ ಟಾಸ್ಕ್. ನೈಜ ಪ್ರಪಂಚವನ್ನು ಆನಂದಿಸಲು ಇರುವ ಅವಕಾಶ. ಒಬ್ಬ ಸಾಮಾನ್ಯ ಮನುಷ್ಯ ಪ್ರತಿದಿನ 4-5 ಗಂಟೆಗಳ ಕಾಲವನ್ನು ಫೋನ್‌ನಲ್ಲಿ ಕಳೆಯುತ್ತಾನೆ. ಅಂಥದ್ರಲ್ಲಿ ಒಂದು ತಿಂಗಳು ಫೋನ್ ಇಲ್ಲದೆ ಹೇಗಿರಬಹುದು ಅನ್ನೋದೇ ಕುತೂಹಲ. ಇತ್ತೀಚಿನ ದಿನಗಳಲ್ಲಿ ಜೀವನದ ದೊಡ್ಡ ಗೊಂದಲವೆಂದರೆ ನಮ್ಮ ಮೊಬೈಲ್ ಫೋನ್ ಅನ್ನೋದು ಸಿಗ್ಗಿ ಕಂಪನಿಯ ಅಭಿಪ್ರಾಯ. ಅದಕ್ಕಾಗಿಯೇ ‘ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ’ ಹಮ್ಮಿಕೊಳ್ಳಲಾಗಿದೆ.
ಜನವರಿ 31 ರವರೆಗೆ ಸಿಗ್ಗಿಯ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ‘ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ’ ಗೆ ನೋಂದಾಯಿಸಿಕೊಳ್ಳಬಹುದು. ಒಂದು ತಿಂಗಳ ಕಾಲ ಮೊಬೈಲ್ ಮುಟ್ಟದೇ ಹಣ ಗಳಿಸುವ ಅವಕಾಶ ಸಿಗಲಿದೆ.