ಜನವಸತಿ ಪ್ರದೇಶಕ್ಕೆ ವಿಮಾನ ಅಪ್ಪಳಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದ ಎರಡನೇ ಅತಿ ದೊಡ್ಡ ನಗರ ಮಿಡಲಿನ್ ನಲ್ಲಿ ನಡೆದಿದೆ. ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓಲಾಯ ಹೆರಾರೆ ವಿಮಾನ ನಿಲ್ದಾಣದಿಂದ ಟೀಕ್ ಆಫ್ ಆದ ಈ ವಿಮಾನದಲ್ಲಿ ಆರು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಏಳು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಆರು ಕಟ್ಟಡಗಳು ಹಾನಿಗೊಳಗಾಗಿವೆ. ಈ ಕಟ್ಟಡಗಳಲ್ಲಿದ್ದವರಿಗೆ ಯಾವುದೇ ಸಾವು ನೋವು ಸಂಭವಿಸಿದೆಯಾ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಮಾನ ಅಪಘಾತಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲವಾದರೂ ಮಿಡಲಿನ್ ಮೇಯರ್ ಡೇನಿಯಲ್, ಎಂಜಿನ್ ದೋಷದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.