ಜಲ್ಪೈಗುರಿ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಬುಧವಾರ ರಾತ್ರಿ ವಿಜಯದಶಮಿಯಂದು ವಿಗ್ರಹ ನಿಮಜ್ಜನದ ಸಂದರ್ಭದಲ್ಲಿ ಉಂಟಾದ ಪ್ರವಾಹದಿಂದಾಗಿ ಮಲ್ ನದಿಯಲ್ಲಿ ಕೊಚ್ಚಿಹೋಗಿ ಕನಿಷ್ಠ ಎಂಟು ಜನರು ಮುಳುಗಿ ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
ಸ್ಥಳೀಯ ಅಧಿಕಾರಿಗಳು 8 ಜನ ಸಾವನ್ನಪ್ಪಿದ್ದಾರೆ. 10 ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ಜಲ್ಪೈಗುರಿ ಎಸ್ಪಿ ದೇಬರ್ಶಿ ದತ್ತಾ ಮಾಹಿತಿ ನೀಡಿದ್ದಾರೆ.
ಅನೇಕರು ಕೊಚ್ಚಿಕೊಂಡು ಹೋಗಿದ್ದಾರೆ. 8 ಜನರ ದೇಹಗಳನ್ನು ಹೊರತೆಗೆಯಲಾಗಿದೆ. ನಿನ್ನೆ ರಾತ್ರಿ 8.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಭೂತಾನ್ ಭಾಗದಲ್ಲಿ ಮಾಲ್ ನದಿಗೆ ಹಠಾತ್ ಪ್ರವಾಹ ಅಪ್ಪಳಿಸಿದೆ. ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಮಟ್ಟ ಏರಲು ಪ್ರಾರಂಭಿಸಿತು. ನಿಮಜ್ಜನ ಸಮಾರಂಭದಲ್ಲಿ ಭಾಗವಹಿಸಲು ನೂರಾರು ಜನರು ಮಾಲ್ ನದಿಯ ದಡದಲ್ಲಿ ಜಮಾಯಿಸಿದಾಗ ದಿಢೀರ್ ಪ್ರವಾಹ ಉಂಟಾಗಿದೆ.
ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡಾರಾ ಅವರು, ನಾವು ಸುಮಾರು 50 ಜನರನ್ನು ರಕ್ಷಿಸಿದ್ದೇವೆ. ಸಣ್ಣಪುಟ್ಟ ಗಾಯಗಳಾಗಿರುವ 13 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಹಠಾತ್ ಪ್ರವಾಹದ ವೀಡಿಯೊ ಹಂಚಿಕೊಂಡಿದ್ದಾರೆ. ದುರ್ಗಾ ವಿಸರ್ಜನ್ ಸಮಯದಲ್ಲಿ ಮಲ್ಬಜಾರ್ ನದಿಯಲ್ಲಿ ಹಠಾತ್ ಪ್ರವಾಹವನ್ನು ಹೇಳಿದ್ದಾರೆ. 100 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಎಷ್ಟು ಮಂದಿ ಸತ್ತಿದ್ದಾರೆಂದು ಯಾರಿಗೂ ತಿಳಿದಿಲ್ಲ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಊರಿಗೆ ಕರಾಳ ದಿನ. ನಿಮ್ಮೆಲ್ಲರ ಪ್ರಾರ್ಥನೆಗಳು ನಮಗೆ ಬೇಕು ಎಂದು ಹೇಳಿದ್ದಾರೆ.
https://twitter.com/Vikram_Tub/status/1577705657817784320