ಶಿವಮೊಗ್ಗ: ಕಾರು ಡಿಕ್ಕಿಯಾಗಿ 8 ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪ ಕಾಲುವೆ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಎಮ್ಮೆಗಳ ಹಿಂಡಿಗೆ ಬ್ರೀಜಾ ಕಾರೊಂದು ಡಿಕ್ಕಿಯಾಗಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ 8 ಎಮ್ಮೆಗಳು ಸಾವನ್ನಪ್ಪಿವೆ.
SHOCKING NEWS: ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣ
ಕಾರು ವಿದ್ಯಾನಗರದಿಂದ ಸಾಗರದ ಕಡೆಗೆ ಹೋಗುತ್ತಿತ್ತು. ರಸ್ತೆ ಮಧ್ಯೆ ಎಮ್ಮೆಗಳ ಹಿಂಡಿಗೆ ಕಾರು ಡಿಕ್ಕಿ ಹೊಡೆದಿದೆ. ಎಮ್ಮೆಗಳು ರಸ್ತೆಯಲ್ಲಿಯೇ ನರಳಾಡಿ ಪ್ರಾಣಬಿಟ್ಟಿವೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ.