ನಾವು ಸಾಮಾನ್ಯವಾಗಿ ದಿನಕ್ಕೆ ಮೂರು ಹೊತ್ತು ತಿನ್ನುತ್ತೇವೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೀಗೆ ಮೂರು ಬಾರಿ ಕಡಿಮೆ ಅಂದ್ರೂ ಮೂರು ತೆರನಾದ ವೆರೈಟಿ ವೆರೈಟಿ ಫುಡ್ ಅನ್ನು ಸೇವಿಸ್ತೇವೆ.
ಆದ್ರೆ ಮಹಿಳೆಯೊಬ್ಬಳು ಯಾರೂ ನಿರೀಕ್ಷಿಸದಂಥ ಕೆಲಸ ಮಾಡಿದ್ದಾಳೆ. ದಿನವೂ ಅಡುಗೆ ಮಾಡಿ ಸುಸ್ತಾಗಿದ್ದ ಈಕೆ ಅದರಿಂದ ಮುಕ್ತಿ ಪಡೆಯಲು ಉಪಾಯವನ್ನು ಕಂಡುಕೊಂಡಿದ್ದಾಳೆ.
ಅಮೆರಿಕದಲ್ಲಿ ನೆಲೆಸಿರುವ 30 ವರ್ಷದ ಮಹಿಳೆಯೊಬ್ಬಳು 8 ತಿಂಗಳಿಗೆ ಬೇಕಾಗುವಷ್ಟು ಊಟವನ್ನು ತನಗಾಗಿ ಮಾತ್ರವಲ್ಲ ಇಡೀ ಕುಟುಂಬಕ್ಕಾಗಿ ಒಮ್ಮೆಲೇ ತಯಾರಿಸಿದ್ದಾಳೆ. ಇದು ವಿಚಿತ್ರ ಮತ್ತು ಅಸಾಧ್ಯ ಎನಿಸಿದ್ರೂ ಸತ್ಯ. 8 ತಿಂಗಳಿಗೆ ಬೇಕಾಗುವಷ್ಟು ಊಟವನ್ನು ತಯಾರಿಸಿ ಅದನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ಹಸಿವಾದಾಗ ಅದನ್ನು ತೆಗೆದುಕೊಂಡು ಬಿಸಿ ಮಾಡಿ ತಿನ್ನಬಹುದು.
ಆಹಾರವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡುವ ತಂತ್ರವನ್ನು ಅವಳು ತಿಳಿದುಕೊಂಡಿದ್ದಾಳಂತೆ. ಆಹಾರವನ್ನು ಸಂರಕ್ಷಿಸಲು ಮೂರು ತಿಂಗಳು ಬೇಕಾಗುತ್ತದೆ ಎನ್ನುತ್ತಾಳೆ ಈ ಮಹಿಳೆ. ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯ ಕುಟುಂಬದ ಎಲ್ಲಾ ಸದಸ್ಯರು ಬೇಸಿಗೆಯಲ್ಲಿ ಮನೆಯಲ್ಲಿ ಬೆಳೆದ ತರಕಾರಿಗಳೊಂದಿಗೆ ಆಹಾರವನ್ನು ಬೇಯಿಸುತ್ತಾರೆ ಮತ್ತು ಈ ತಾಜಾ ತರಕಾರಿಗಳಿಂದ ಆಹಾರವನ್ನು ತಯಾರಿಸುವ ಮೂಲಕ ಚಳಿಗಾಲದಲ್ಲಿ ಅದನ್ನು ಸಂರಕ್ಷಿಸುತ್ತಾರೆ. ಇಡೀ ಕುಟುಂಬ ಸಂಪೂರ್ಣವಾಗಿ ಸಾವಯವ ಆಹಾರವನ್ನು ಅವಲಂಬಿಸಿದೆ.