8ನೇ ವೇತನ ಆಯೋಗ ರಚನೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಯೋಗ ರಚನೆಯ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಮಾಹಿತಿ ನೀಡಿದ್ದು, ಒಂದೊಮ್ಮೆ ಎಂಟನೇ ವೇತನ ಆಯೋಗ ರಚನೆಯಾಗಿದ್ದರೆ 2026 ರ ಜನವರಿ 1ರಂದು ಕೇಂದ್ರ ಸರ್ಕಾರ, ನೌಕರರ ಸಂಬಳವನ್ನು ಪರೀಕ್ಷೆ ಮಾಡುವ ಸಾಧ್ಯತೆ ಇದೆ.
ಏಳನೇ ವೇತನ ಆಯೋಗದಂತೆ ಶಿಫಾರಸ್ಸಿನಂತೆ ಈಗಾಗಲೇ ಪರಿಷ್ಕರಿಸಲಾಗಿರುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 2023ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.