alex Certify ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಶೇ. 6 ರಷ್ಟು ಡಿಎ ಹೆಚ್ಚಳ ಘೋಷಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಶೇ. 6 ರಷ್ಟು ಡಿಎ ಹೆಚ್ಚಳ ಘೋಷಣೆ ಸಾಧ್ಯತೆ

ನವದೆಹಲಿ: ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗುವುದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಅದೃಷ್ಟ ಖುಲಾಯಿಸಲಿದೆ.

ಈ ವರ್ಷದವರೆಗಿನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ(AICPI) ದತ್ತಾಂಶದ ಪ್ರಕಾರ, ಕೇಂದ್ರ ಉದ್ಯೋಗಿಗಳು 5% ರಷ್ಟು DA ಹೆಚ್ಚಳ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಿಂದೆ ನಿರೀಕ್ಷಿತ 4% ಹೆಚ್ಚಾಗಿದೆ. ಆದಾಗ್ಯೂ, ಮೇ ತಿಂಗಳ AICPI ದತ್ತಾಂಶವು ಮೇಲ್ಮುಖವಾಗಿ ಮುಂದುವರೆದ್ರೆ, ಡಿಎ 6% ಕ್ಕೆ ಹೆಚ್ಚಾಗಬಹುದು.

ನಿರೀಕ್ಷಿತ 5% ಹೆಚ್ಚಳದೊಂದಿಗೆ, ಈ ವರ್ಷದ ಜನವರಿಯಲ್ಲಿ 3% ಹೆಚ್ಚಳದ ನಂತರ ಪ್ರಸ್ತುತ 34% ರಷ್ಟಿರುವ DA, 39% ತಲುಪುತ್ತದೆ. ಇದು 6% ಆಗಿದ್ದರೆ, ಭಾರತದಲ್ಲಿ ಮತ್ತು ಜಾಗತಿಕವಾಗಿ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ದೊಡ್ಡ ಉತ್ತೇಜನ ನೀಡುತ್ತದೆ. ಅಂತಹ ಹೆಚ್ಚಳವು ಉದ್ಯೋಗಿಗಳ ಮೂಲ ವೇತನದ ಆಧಾರದ ಮೇಲೆ ತಿಂಗಳಿಗೆ ಸುಮಾರು 3,400 ರೂ. ಅಥವಾ ವಾರ್ಷಿಕ 40,000 ರೂ. ನಷ್ಟು ವೇತನ ಜಾಸ್ತಿಯಾಗಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. ಮೊದಲು ಜನವರಿಯಲ್ಲಿ ಮತ್ತು ನಂತರ ಜುಲೈನಲ್ಲಿ ಡಿಎ ಹೆಚ್ಚಳ ಮಾಡಲಿದ್ದು, ಪ್ರಕಟಣೆ ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಬರುತ್ತದೆ. 2020 ರ ಜನವರಿ ಮತ್ತು ಜೂನ್ 2021 ರ ನಡುವೆ ಒಂದೂವರೆ ವರ್ಷಗಳ ಕಾಲ ಸಾಂಕ್ರಾಮಿಕ ರೋಗದ ಮಧ್ಯೆ ಕೇಂದ್ರ ಉದ್ಯೋಗಿಗಳಿಗೆ ಡಿಎ ಹೆಚ್ಚಳವನ್ನು ಹಣಕಾಸು ಸಚಿವಾಲಯ ಸ್ಥಗಿತಗೊಳಿಸಿತ್ತು.

ಉದ್ಯೋಗಿಗಳ ಡಿಎಯನ್ನು ಜುಲೈ 2021 ರಲ್ಲಿ ಹಿಂದೆ 17% ರಿಂದ 28% ಕ್ಕೆ ಹೆಚ್ಚಿಸಿದ್ದು, ಅಕ್ಟೋಬರ್‌ ನಲ್ಲಿ ಮುಂದಿನ DA ಹೆಚ್ಚಳ 31% ಕ್ಕೆ ತಲುಪಿತು. ಜನವರಿಯಲ್ಲಿ ಡಿಎ ಹೆಚ್ಚಳವಾಗಿ ಈಗ 34% ರಷ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...