ದೇಶದ ಒಂದು ಕೋಟಿಗೂ ಹೆಚ್ಚು ಕೇಂದ್ರೀಯ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಭತ್ಯೆ ಸಿಗಲು ಶುರುವಾಗಿದೆ. ಕೇಂದ್ರ ಸರ್ಕಾರ ಡಿಎ, ಡಿಆರ್ ಅನ್ನು ಶೇಕಡಾ 17 ರಿಂದ ಶೇಕಡಾ 28 ಕ್ಕೆ ಹೆಚ್ಚಿಸಿದೆ. ಶೇಕಡಾ 11ರಷ್ಟು ಹೆಚ್ಚಿನ ಹಣ ಕೇಂದ್ರ ಸರ್ಕಾರಿ ನೌಕರರಿಗೆ ಸಿಗ್ತಿದೆ.
ಕೇಂದ್ರ ಸರ್ಕಾರವು ಡಿಎಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದ್ರೂ, ರಾಜ್ಯ ಸರ್ಕಾರಗಳು ಅದನ್ನು ತಮ್ಮ ರಾಜ್ಯಗಳಲ್ಲಿಯೂ ಜಾರಿಗೊಳಿಸುತ್ತವೆ. ಅನೇಕ ರಾಜ್ಯಗಳು ಡಿಎ ಹೆಚ್ಚಳ ಮಾಡಿವೆ. ಅನೇಕ ರಾಜ್ಯಗಳಲ್ಲಿ ಇದಕ್ಕೆ ತಯಾರಿ ನಡೆಯುತ್ತಿದೆ.
ಕರ್ನಾಟಕ ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಜನವರಿ 2020 ರಿಂದ ಜೂನ್ 2021 ರವರೆಗಿನ ಅವಧಿಗೆ ಭತ್ಯೆಯನ್ನು ಶೇಕಡಾ 11.25 ರಿಂದ ಶೇಕಡಾ 21.5ಕ್ಕೆ ಹೆಚ್ಚಿಸಿದೆ.
ಬಿಹಾರದ ನಿತೀಶ್ ಕುಮಾರ್ ಸರ್ಕಾರ, ತುಟ್ಟಿ ಭತ್ಯೆಯನ್ನು ಶೇಕಡಾ 15ರಿಂದ ಶೇಕಡಾ 28ಕ್ಕೆ ಏರಿಸಲು ತಯಾರಿ ನಡೆಸಿದೆ. ರಾಜಸ್ಥಾನ ಸರ್ಕಾರ, ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 17ರಿಂದ ಶೇಕಡಾ 28ಕ್ಕೆ ಹೆಚ್ಚಿಸಿದೆ.