ಕೊರೊನಾ ವೈರಸ್ ಮಧ್ಯೆಯೇ ಕೇಂದ್ರ ಸರ್ಕಾರ, ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ನೀಡಿದೆ. ಈ ಬಾರಿ ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಿದೆ. ಕೇಂದ್ರ ನೌಕರರ ನಂತರ, ಈಗ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ 8 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಡಿಎ ಭತ್ಯೆಯನ್ನು ಹೆಚ್ಚಿಸಿದೆ. ಸರ್ಕಾರಿ ಬ್ಯಾಂಕ್ ಉದ್ಯೋಗಿಗಳು, ಆಗಸ್ಟ್ ತಿಂಗಳ ಸಂಬಳದ ಜೊತೆ ಹೆಚ್ಚಿದ ಡಿಎ ಪಡೆಯಲಿದ್ದಾರೆ.
ಈ ಡಿಎ ಹೆಚ್ಚಳ ಮೂರು ತಿಂಗಳಿಗೆ ಮಾತ್ರ ಅನ್ವಯವಾಗಲಿದೆ. ಇದನ್ನು ಎಐಎಸಿಪಿಐ ಆಧಾರದ ಮೇಲೆ ನಿರ್ಧರಿಸಲಾಗಿದೆ. ಸರ್ಕಾರಿ ಬ್ಯಾಂಕ್ ಉದ್ಯೋಗಿಗಳ ವೇತನವು ವಿವಿಧ ವರ್ಗಗಳಲ್ಲಿರುತ್ತದೆ. ಬ್ಯಾಂಕಿನ ಪ್ರೊಬೇಷನರಿ ಅಧಿಕಾರಿಯ ಸಂಬಳ ತಿಂಗಳಿಗೆ 40 ರಿಂದ 42 ಸಾವಿರ ರೂಪಾಯಿ ಇರುತ್ತದೆ. ಮೂಲ ವೇತನ 27,620 ರೂಪಾಯಿಯಿರುತ್ತದೆ. ಇದರ ಜೊತೆ ಶೇಕಡಾ 2.10ರಷ್ಟು ಡಿಎ ಹೆಚ್ಚಳವಾಗಿದೆ.
ಬಡ್ತಿಯ ನಂತರ ಗರಿಷ್ಠ ಮೂಲ ವೇತನ 42,020 ರೂಪಾಯಿ ಹೆಚ್ಚಳವಾಗಲಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಪ್ರಕಾರ, ಮೇ, ಜೂನ್ ಮತ್ತು ಜುಲೈ 2021 ರ ಡಿಎ ಅಂಕಿ 367 ಸ್ಲಾಬ್‌ಗಳು. ಆಗಸ್ಟ್ ನಿಂದ ಅಕ್ಟೋಬರ್‌ವರೆಗೆ 30 ಸ್ಲಾಬ್‌ಗಳ ಹೆಚ್ಚಳವಾಗಿದೆ. ಈ ಆಧಾರದ ಮೇಲೆ ಈಗ ಅವರ ಡಿಎ ಶೇಕಡಾ 27.79 ಕ್ಕೆ ಹೆಚ್ಚಾಗಿದೆ.