ಅಂಚೆ ಕಚೇರಿ ನೌಕರರಿಗೆ ಬೇಸರದ ಸುದ್ದಿಯೊಂದಿದೆ. ದೀಪಾವಳಿಯಲ್ಲಿ ದೊಡ್ಡ ಮಟ್ಟದ ಬೋನಸ್ ಸಿಗ್ತಿಲ್ಲ. ಈ ಬಾರಿಯ ದೀಪಾವಳಿಯಲ್ಲಿ, ಈ ಉದ್ಯೋಗಿಗಳಿಗೆ ಅರ್ಧ ಬೋನಸ್ ಮಾತ್ರ ಸಿಗಲಿದೆ.
ಅಂಚೆ ಕಚೇರಿ ಉದ್ಯೋಗಿಗಳಿಗೆ 120 ದಿನಗಳ ಬೋನಸ್ ನೀಡಲು ಹಣಕಾಸು ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಅಂಚೆ ಇಲಾಖೆಯ ಅರ್ಹ ಉದ್ಯೋಗಿಗಳಿಗೆ ಈ ಬಾರಿ ಕೇವಲ 60 ದಿನಗಳ ಬೋನಸ್ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
’ಬೈ ನೌ – ಪೇ ಲೇಟರ್’ ಎಂಬ ಜನಪ್ರಿಯ ಆಯ್ಕೆ ಬಗ್ಗೆ ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ
ಅಂಚೆ ಇಲಾಖೆಯು ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 120 ದಿನಗಳ ಉತ್ಪಾದಕತೆಯ ಬೋನಸ್ ನೀಡಲು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಈ ಪ್ರಸ್ತಾವನೆಯನ್ನು ಸ್ವೀಕರಿಸಲು ಸಚಿವಾಲಯ ನಿರಾಕರಿಸಿದೆ. ಈ ಬಾರಿ 120 ದಿನಗಳ ಬದಲಾಗಿ, 60 ದಿನಗಳ ಉತ್ಪಾದಕತೆಯ ಲಿಂಕ್ಡ್ ಬೋನಸ್ ದೀಪಾವಳಿಯಲ್ಲಿ ಲಭ್ಯವಾಗಲಿದೆ ಎಂದು ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಅಶೋಕ್ ಕುಮಾರ್ ಹೇಳಿದ್ದಾರೆ.
ಅಂಚೆ ಕಚೇರಿ ಸಿಬ್ಬಂದಿ, ಕಾರ್ಮಿಕರು, ಗ್ರೂಪ್ ಬಿಯ ನಾನ್ ಗೆಜೆಟೆಡ್ ಅಧಿಕಾರಿಗಳು, ಎಂಟಿಎಸ್ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ 7 ಸಾವಿರ ರೂಪಾಯಿ ಸಿಗಲಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಉದ್ಯೋಗಿಗಳಿಗೆ ಬೋನಸ್ ಸಿಗುವುದಿಲ್ಲ ಎನ್ನಲಾಗಿದೆ.