ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಖುಷಿ ಸುದ್ದಿಯೊಂದನ್ನು ನೀಡಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಾದು ಕುಳಿತಿರುವ ದಿನ ಹತ್ತಿರ ಬರ್ತಿರುವಂತೆ ಕಾಣ್ತಿದೆ. ಕಳೆದ 18 ತಿಂಗಳಿಂದ ಬಾಕಿ ಉಳಿದಿರುವ ಡಿಎಯನ್ನು ಒಂದೇ ಬಾರಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಕೇಂದ್ರ ಸರ್ಕಾರ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ವರದಿಗಳ ಪ್ರಕಾರ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ನೌಕರ ಡಿಎ ಬಾಕಿ ಬಗ್ಗೆ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ಡಿಎ ಬಗ್ಗೆ ನಿರ್ಧಾರ ಹೊರಬಂದಲ್ಲಿ ಒಂದೇ ಬಾರಿ ನೌಕರರ ಖಾತೆಗೆ 2 ಲಕ್ಷ ರೂಪಾಯಿ ಬರಲಿದೆ.
ಡಿಎ ಮರುಸ್ಥಾಪಿಸುವಾಗ ಬಾಕಿ ಉಳಿದಿರುವ 18 ತಿಂಗಳ ಡಿಎ ಬಾಕಿಯನ್ನೂ ಒನ್‌ಟೈಮ್ ಸೆಟಲ್ಮೆಂಟ್ ಮಾಡಬೇಕು ಎಂದು ರಾಷ್ಟ್ರೀಯ ಜಂಟಿ ಸಲಹಾ ಯಂತ್ರೋಪಕರಣ ಮಂಡಳಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಪ್ರಧಾನಿ ಮೋದಿಯವರು ಗ್ರೀನ್ ಸಿಗ್ನಲ್ ನೀಡಿದರೆ ಈ ವರ್ಷ ಉದ್ಯೋಗಿಗಳ ಖಾತೆಗೆ ಭಾರಿ ಮೊತ್ತ ಬರಲಿದೆ. ಕೇಂದ್ರ ನೌಕರರು 1 ಲಕ್ಷದ 44 ಸಾವಿರದ 200 ರಿಂದ 2 ಲಕ್ಷ 18 ಸಾವಿರದ 200 ರೂಪಾಯಿವರೆಗೆ ಡಿಎ ಬಾಕಿ ಪಡೆಯಲಿದ್ದಾರೆ.
ವಿವಿಧ ಶ್ರೇಣಿಯ ಉದ್ಯೋಗಿಗಳಿಗೆ ಬಾಕಿ ಮೊತ್ತವು ವಿಭಿನ್ನವಾಗಿರುತ್ತದೆ. ಲೆವೆಲ್-1 ನೌಕರರ ಡಿಎ ಬಾಕಿ 11880 ರಿಂದ 37000 ರೂಪಾಯಿಯಿದೆ. ಹಂತ-13 ಉದ್ಯೋಗಿಗಳ ಡಿಎ ಬಾಕಿ 144200 ರಿಂದ 218200 ರೂಪಾಯಿಯಿದೆ.