ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಯಾಣ ಭತ್ಯೆ ಹಕ್ಕು ಸಲ್ಲಿಕೆ ಗಡುವನ್ನು 60 ರಿಂದ 180 ದಿನಗಳವರೆಗೆ ವಿಸ್ತರಿಸಿದೆ. ಈ ಸೌಲಭ್ಯ 15 ಜೂನ್ 2021 ರಿಂದ ಜಾರಿಗೆ ಬಂದಿದೆ. ನಿವೃತ್ತಿಯ ನಂತರ ಭತ್ಯೆ ಹಕ್ಕನ್ನು ಠೇವಣಿ ಇಡಲು 60 ದಿನಗಳ ಅವಧಿ ಕಡಿಮೆಯಾದ ಕಾರಣ, ನಿವೃತ್ತ ಕೇಂದ್ರ ನೌಕರರ ಅನುಕೂಲಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಹಣಕಾಸು ಸಚಿವಾಲಯ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಈ ಸಮಯ ಮಿತಿಯನ್ನು ವಿಸ್ತರಿಸಲು ಅನೇಕ ಉಲ್ಲೇಖಗಳನ್ನು ಸ್ವೀಕರಿಸಲಾಗಿದೆ. ನಿವೃತ್ತಿಯಾದ ಕೇಂದ್ರ ಉದ್ಯೋಗಿಯು ನಿವೃತ್ತಿಯ ನಂತರ ಕುಟುಂಬದೊಂದಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾನೆ. ಇದಕ್ಕೆ ಕೆಲ ಸಮಯ ಬೇಕಾಗುತ್ತದೆ. ಹಾಗಾಗಿ ಗಡುವನ್ನು 60 ದಿನಗಳಿಂದ 180 ದಿನಗಳಿಗೆ ವಿಸ್ತರಿಸಲಾಗಿದೆ ಎಂದವರು ಹೇಳಿದ್ದಾರೆ.
ನಿವೃತ್ತಿಯಾದ ಕೇಂದ್ರ ಸರ್ಕಾರಿ ಉದ್ಯೋಗಿ, ಪ್ರಯಾಣದ ನಂತರ ಆರು ತಿಂಗಳವರೆಗೆ ಪ್ರಯಾಣ ವೆಚ್ಚವನ್ನು ಸಲ್ಲಿಸಬಹುದು. ಸರ್ಕಾರದ ಈ ನಿರ್ಧಾರ ಅನೇಕ ನಿವೃತ್ತ ಉದ್ಯೋಗಿಗಳಿಗೆ ನೆಮ್ಮದಿ ನೀಡಿದೆ.